ಮಠಗಳ ಮೇಲೇಕೆ ಕೆಂಗಣ್ಣು?07-02-2018

ಬೆಂಗಳೂರು: ರಾಜ್ಯದಲ್ಲಿನ ಮಠಗಳ ನಿಯಂತ್ರಣಕ್ಕೆ ಒಳಪಟ್ಟ ಶಾಲೆ ಮತ್ತು ಕಾಲೇಜುಗಳನ್ನು ಸರ್ಕಾರ ವಶಕ್ಕೆ ಪಡೆಯಲು ಚಿಂತನೆ ನಡೆಸಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡ ಆರ್.ಅಶೋಕ್ ಪ್ರತಿಕ್ರಿಯೆ ನೀಡಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಮಠಮಾನ್ಯಗಳನ್ನು ನಿಯಂತ್ರಣ ಮಾಡಲು ಹೊರಟಿದೆ ಎಂದು ಆರೋಪಿಸಿದ ಆರ್.ಅಶೋಕ್,  ಹಿಂದೂ, ಜೈನ, ಸಿಖ್ ಮತ್ತು ಬೌದ್ಧ ಮಠಗಳನ್ನು ಮಾತ್ರ ಏಕೆ ಟಾರ್ಗೆಟ್ ಮಾಡಿಕೊಂಡಿದ್ದೀರಿ? ಮುಸ್ಲಿಂ ಸಂಸ್ಥೆಗಳಿಗೆ ರಿಯಾಯ್ತಿ ಏಕೆ? ಎಂದು ಪ್ರಶ್ನಿಸಿದ್ದಾರೆ. ಈ ಕುರಿತು ಹೊರಡಿಸಿರುವ ಸುತ್ತೋಲೆಯನ್ನು ಕೂಡಲೇ ವಾಪಸ್ ಪಡೆಯಬೇಕು ಮತ್ತು  ಸಿಎಂ ಸಿದ್ದರಾಮಯ್ಯನವರು ರಾಜ್ಯದ ಜನರ ಕ್ಷಮೆಯಾಚಿಸಬೇಕು ಎಂದು ಆರ್.ಅಶೋಕ್ ಆಗ್ರಹಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಮಠಮಾನ್ಯಗಳಿಗೆ ಭೇಟಿ ನೀಡುತ್ತಿದ್ದಾರೆ, ಅವರದ್ದು ಸಾಫ್ಟ್ ಹಿಂದುತ್ವ ಅಂತಾರೆ, ಹೀಗಿದ್ದರೂ ಕೂಡ, ಮಠಗಳ ಮೇಲೆ ನಿಯಂತ್ರಣವೇಕೆ? ಧರ್ಮ ಒಡೆಯುವ ಷಡ್ಯಂತ್ರವೇಕೆ ಎಂದು ಆರ್.ಅಶೋಕ್ ಕಿಡಿಕಾರಿದ್ದಾರೆ.


ಸಂಬಂಧಿತ ಟ್ಯಾಗ್ಗಳು

R.ashok Target ಸಿದ್ದರಾಮಯ್ಯ ಮಠಮಾನ್ಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ