ಅಕ್ರಮ ಆಂಟಿಬಯೋಟಿಕ್ಸ್ ಹಾವಳಿ…

Illegal antibiotics are plagued ...

06-02-2018

ಭಾರತದಲ್ಲಿ ಮಾರಾಟವಾಗುವ ಆಂಟಿಬಯೋಟಿಕ್ ಔಷಧಿಗಳಲ್ಲಿ ಶೇಕಡ 64ರಷ್ಟು ಔಷಧಿಗಳು ಅಕ್ರಮ ಎಂದು ಒಂದು ಸಂಶೋಧನಾ ವರದಿ ಹೇಳುತ್ತಿದೆ. ಕಳೆದ 5 ವರ್ಷಗಳಿಂದ ಭಾರತದಲ್ಲಿ ಬಳಕೆಯಲ್ಲಿರುವ ಒಟ್ಟಾರೆ 118 ವಿವಿಧ ರೀತಿಯ ನಿಗದಿತ ಡೋಸ್ ಕಾಂಬಿನೇಷನ್ ಹೊಂದಿರುವ ಒಂದಕ್ಕಿಂತ ಹೆಚ್ಚು ಔಷಧಿ ಸಂಯುಕ್ತಗೊಳಿಸಿದ ಆಂಟಿಬಯೋಟಿಕ್‌ಗಳ ಪರಿಶೀಲನೆ ಮಾಡಲಾಗಿದೆ. ಇವುಗಳಲ್ಲಿ ಶೇ.64ರಷ್ಟು ಔಷಧಿಗಳು ಅಕ್ರಮವಾಗಿದ್ದು, ಇವುಗಳು ‘ಡ್ರಗ್ ರೆಸಿಸ್ಟೆಂಟ್ ಅಂದರೆ, ಔಷಧಿಯನ್ನೇ ಪ್ರತಿರೋಧಿಸುವಂಥ ಕಾಯಿಲೆಗಳು ಹೆಚ್ಚಾಗಲು ಕಾರಣವಾಗಿವೆ’ ಎಂದು ಬ್ರಿಟಿಷ್ ಕ್ಲಿನಿಕಲ್ ಫಾರ್ಮಾಕೋಲಜಿ ಜರ್ನಲ್ ವರದಿ ಹೇಳುತ್ತದೆ. ಕ್ಷಯರೋಗವೂ ಸೇರಿದಂತೆ ಭಾರತದಲ್ಲಿನ ಹಲವು ಕಾಯಿಲೆಗಳು, ಈಗಾಗಲೇ ಅತ್ಯಂತ ಹೆಚ್ಚಿನ ಡ್ರಗ್ ರೆಸಿಸ್ಟೆನ್ಸ್ ಮಟ್ಟ ಹೊಂದಿವೆ. ವಿಶ್ವಸಂಸ್ಥೆಯೂ ಕೂಡ ಡ್ರಗ್ ರೆಸಿಸ್ಟೆಂಟ್ ರೋಗಾಣುಗಳು, ಜಾಗತಿಕ ಆರೋಗ್ಯ ತುರ್ತುಪರಿಸ್ಥಿತಿ ತಂದೊಡ್ಡುತ್ತಿದ್ದು, ಆಧುನಿಕ ಔಷಧಗಳು ಸಾಧಿಸಿದ್ದ ಪ್ರಗತಿಯನ್ನೇ ಕುಂಠಿತಗೊಳಿಸುತ್ತಿವೆ ಎಂದು ಹೇಳಿದೆ. ಇದು ಹೀಗೆ ಮುಂದುವರಿದಲ್ಲಿ, ಇವತ್ತು ಸುಲಭವಾಗಿ ವಾಸಿಯಾಗಬಲ್ಲಂಥ ಕಾಯಿಲೆಗಳು, ಮುಂದಿನ ದಿನಗಳಲ್ಲಿ ಯಾರಿಗಾದರೂ ಬಂದರೆ, ಅವರು ಅದನ್ನು ವಾಸಿಮಾಡಿಕೊಳ್ಳಲಾಗದೆ ಸಾಯುವಂಥ ಪರಿಸ್ಥಿತಿ ಬರಬಹುದು ಎಂಬ ಆತಂಕ ವ್ಯಕ್ತವಾಗಿದೆ.


ಸಂಬಂಧಿತ ಟ್ಯಾಗ್ಗಳು

pharmacology antibiotic ಆತಂಕ ಡ್ರಗ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ