ಮೂವರು ಕೊಲೆಗಡುಕರ ಬಂಧನ

Murder accused arrested

06-02-2018

ಬೆಂಗಳೂರು: ಮಲ್ಲತ್ತಹಳ್ಳಿಯ ಮಾರುತಿ ಬಾರ್ ಅಂಡ್ ರೆಸ್ಟೊರೆಂಟ್ ಬಳಿ ಕುಡಿದ ಅಮಲಿನಲ್ಲಿ ಗುರಾಯಿಸಿದ ಕಾರಣಕ್ಕೆ ಅರುಣ್ ಕೃಷ್ಣ ಎಂಬ ಯುವಕನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದ ಮೂವರನ್ನು ಜ್ಞಾನಭಾರತಿ ಪೊಲೀಸರು ಬಂಧಿಸಿದ್ದಾರೆ. ಜರಗನಹಳ್ಳಿಯ ಚಿಕ್ಕಸ್ವಾಮಿ ಲೇಔಟ್‍ನ ಪ್ರದೀಪ್ ಅಲಿಯಾಸ್ ದೀಪು (25), ಯಲಚೇನಹಳ್ಳಿಯ ಶಿವರಾಜ ಅಲಿಯಾಸ್ ಕರಿಯ (24) ಹಾಗೂ ಮಲ್ಲತ್ತಹಳ್ಳಿಯ ಭವಾನಿನಗರದ ಸತೀಶ (29) ಬಂಧಿತ ಆರೋಪಿಗಳು.

ಕಳೆದ ಫೆಬ್ರವರಿ 3ರ ರಾತ್ರಿ 11ರ ವೇಳೆ ಅರುಣ್ ಕೃಷ್ಣ ಹಾಗೂ ವಿಲ್ಸನ್ ಸೋಮಯ್ಯ ಅವರು ಮಲ್ಲತ್ತಹಳ್ಳಿಯ ಮಾರುತಿ ಬಾರ್ ಅಂಡ್ ರೆಸ್ಟೊರೆಂಟ್‍ಗೆ ಮದ್ಯಪಾನ ಮಾಡಲು ಹೋಗಿದ್ದರು. ಮದ್ಯಪಾನ ಮಾಡುವ ವೇಳೆ ಎದುರಿಗಿದ್ದ ಮೂವರ ಕಡೆ ತಿರುಗಿ ನೋಡಿದ್ದಾರೆ. ಮೊದಲೇ ಮದ್ಯದ ಅಮಲಿನಿಂದ ಆರೋಪಿಗಳು ಯಾಕೆ ಗುರಾಯಿಸುತ್ತಿದ್ದಿಯಾ ಎಂದು ಪ್ರಶ್ನಿಸಿ ಜಗಳ ಮಾಡಿದ್ದು, ಬಾರ್‍ನ ಸಿಬ್ಬಂದಿ ಹೊರಗಡೆ ಎರಡೂ ಕಡೆಯವರನ್ನು ಸಮಾಧಾನಪಡಿಸಿ ಹೊರ ಕಳುಹಿಸಿದ್ದರು.

ಹೊರಗೆ ಬಂದ ನಂತರ ಮತ್ತೆ ಜಗಳ ತೆಗೆದ ಬಂಧಿತರು ಅರುಣ್ ಕೃಷ್ಣನ ಎದೆಗೆ ಚಾಕುವಿನಿಂದ ಇರಿದಿದ್ದು, ತಡೆಯಲು ಬಂದ ವಿಲ್ಸನ್ ಸೋಮಯ್ಯ ಕೈಗೂ ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ. ಚಾಕು ಆಳಕ್ಕಿಳಿದಿದ್ದರಿಂದ ಅರುಣ್ ಕೃಷ್ಣ  ಸ್ಥಳದಲ್ಲೇ ಮೃತಪಟ್ಟಿದ್ದರು. ಪ್ರಕರಣ ದಾಖಲಿಸಿ ತನಿಖೆ ಕೈಗೊಂಡ ಜ್ಞಾನಭಾರತಿ ಪೊಲೀಸರು ಮೂವರನ್ನು ಬಂಧಿಸಿ ವಿಚಾರಣೆ ನಡೆಸಿದ್ದು ಅವರೆಲ್ಲರೂ ಕೆಎಸ್ ಲೇಔಟ್, ಸುಬ್ರಮಣ್ಯಪುರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕೊಲೆ ಯತ್ನ, ಸುಲಿಗೆ, ಡಕಾಯಿತಿ ದರೋಡೆ ಇನ್ನಿತರ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದೆ ಎಂದು ಡಿಸಿಪಿ ಅನುಚೇತ್ ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

murder accused ಅಪರಾಧ ಜ್ಞಾನಭಾರತಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ