‘ಪಿಂಚಣಿ ಯೋಜನೆ ಬದಲಾವಣೆ ಅಸಾಧ್ಯ'

There is no change in pension scheme says CM

06-02-2018

ಬೆಂಗಳೂರು: ಕಳೆದ 2006ರಲ್ಲಿ ಜಾರಿಗೆ ಬಂದ ನೂತನ ಪಿಂಚಣಿ ಯೋಜನೆ ಮುಂದುವರೆಯಲಿದ್ದು, ಇದನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಗಿಂದು ತಿಳಿಸಿದರು. ಪ್ರಶ್ನೋತ್ತರ ಕಲಾಪದಲ್ಲಿ ಡಿ.ಮಹಾಲಿಂಗಪ್ಪ ಅವರ ಪ್ರಸ್ತಾಪಕ್ಕೆ ಉತ್ತರಿಸಿದ ಅವರು, ಆರನೇ ವೇತನ ಆಯೋಗ ವೇತನ ಪರಿಷ್ಕರಣೆ ಸಂಬಂಧ ಸಲ್ಲಿಸಿರುವ ವರದಿಯನ್ನು ಪರಿಗಣಿಸಿ ಜಾರಿಗೆ ತರಲಾಗುವುದು ಎಂದರು.

ಸಚಿವ ಸಂಪುಟದಲ್ಲಿ ಈ ಬಗ್ಗೆ ಚರ್ಚೆ ನಡೆಸಿ ಪರಿಶೀಲನೆ ನಡೆಸಲಾಗುವುದು. ನೂತನ ಪಿಂಚಣಿ ಯೋಜನೆಯನ್ನು ತಜ್ಞರ ಸಮಿತಿ ಶಿಫಾರಸ್ಸು ಮಾಡಲಾಗಿದೆ. ತ್ರಿಪುರ, ಪಶ್ಚಿಮ ಬಂಗಾಳ ಹೊರತು ಪಡಿಸಿದಂತೆ ಕೇಂದ್ರ ಸರ್ಕಾರ ಸೇರಿದಂತೆ ಎಲ್ಲಾ ಕಡೆಯಲ್ಲೂ 2006ರ ಪಿಂಚಣಿ ಯೋಜನೆ ಜಾರಿಯಲ್ಲಿದೆ. ಇದನ್ನು ಈಗ ಬದಲಾವಣೆ ಮಾಡುವುದು ಸಾಧುವಲ್ಲ ಎಂದರು.

ಇದಕ್ಕೂ ಮೊದಲು ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್, ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತಿತರರು ಹೊಸ ಪಿಂಚಣಿ ಬೇಡ. ಹಳೆಯ ಪಿಂಚಣಿ ಯೋಜನೆಯನ್ನೇ ಜಾರಿಗೊಳಿಸಬೇಕು. ಇದು ಎರಡು ಲಕ್ಷ ಸರ್ಕಾರಿ ನೌಕರರ ಬೇಡಿಕೆಯಾಗಿದೆ. ಸರ್ಕಾರ ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.


ಸಂಬಂಧಿತ ಟ್ಯಾಗ್ಗಳು

pension siddaramaiah ಸರ್ಕಾರಿ ನೌಕರ ಕಲಾಪ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ