ನಂಗಾನಾಚ್ ನೃತ್ಯಕ್ಕೆ ಕಡಿವಾಣ ಹಾಕಿ

protest against nanganach dance

06-02-2018

ಶಿವಮೊಗ್ಗ: ಅಶ್ಲೀಲ ನೃತ್ಯಗಳಿಗೆ ಆಸ್ಪದ ನೀಡುತ್ತಿರುವ ಆರ್ಕೆಸ್ಟ್ರಾ ತಂಡಗಳನ್ನು ನಿಷೇಧಿಸುವಂತೆ ಒತ್ತಾಯಿಸಿ ನಗರದ ಸಪ್ತಸ್ವರ ಸಾಂಸ್ಕೃತಿಕ ಸಂಸ್ಥೆಯ ಕಲಾವಿದರು ಹಾಗು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ರಕ್ಷಣಾ ಇಲಾಖೆ ಮೊರೆ ಹೋಗಿದ್ದಾರೆ.

ಆರ್ಕೆಸ್ಟ್ರಾ ಹೆಸರಲ್ಲಿ ಹರೆಯದ ಹೆಣ್ಣುಮಕ್ಕಳನ್ನು ಬಳಸಿಕೊಂಡು ಅರೆಬರೆ ಬಟ್ಟೆತೊಟ್ಟು ನಂಗಾನಾಚ್ ನೃತ್ಯದಲ್ಲಿ ತೊಡಗಿಸಿ ಯುವಕರಿಗೆ ಉದ್ರೇಕವಾಗುವಂತೆ ಮಾಡುತ್ತಿರುವುದು ನಮ್ಮ ಸಂಸ್ಕೃತಿಗೆ ಧಕ್ಕೆ ತರುತ್ತಿರುವುದು ಖಂಡನೀಯ. ಕೆಲ ಆರ್ಕೆಸ್ಟ್ರಾ ತಂಡಗಳು ಭದ್ರಾವತಿ ನಗರದ ಹೆಸರಿನಲ್ಲಿ ಬೇರೆ ಬೇರೆ ಸ್ಥಳಗಳಲ್ಲಿ ನಂಗಾನಾಚ್ ನೃತ್ಯ ಪ್ರದರ್ಶಿಸುತ್ತಾ ಐತಿಹಾಸಿಕ ಕಲಾವಿದರ ಬೇಡಿಕೆಗೆ ಕಳಂಕ ತರುತ್ತಿರುವುದು ಮಾನವಂತರು ತಲೆ ತಗ್ಗಿಸುವಂತಾಗಿದೆ. ಇಂತಹ ಸಂಸ್ಕೃತಿಗೆ ನಾಂದಿ ಹಾಡಬೇಕು. ಸಂಸ್ಕೃತಿ ಉಳಿಸುವ ನೈಜ ರೀತಿಯ ಹಾಡುಗಾರಿಕೆ, ನೃತ್ಯ, ಸಂಗೀತ, ಭರತನಾಟ್ಯ ಪ್ರದರ್ಶಿಸಬೇಕು. ಕಲಾವಿದರುಗಳಿಗೆ ಅಪಮಾನ ಮಾಡುತ್ತಿರುವ ಹಾಗು ಕೆಟ್ಟ ಸಂಸ್ಕೃತಿಗೆ ಪ್ರೋತ್ಸಾಹ ನೀಡುತ್ತಿರುವ ತಂಡಗಳ ಮೇಲೆ ಕಠಿಣ ಕಾನೂನು ಕ್ರಮ ಕೈಗೊಂಡು ನ್ಯಾಯಾಲಯದ ಆದೇಶದಂತೆ ಶಿಸ್ತು ಕ್ರಮ ಕೈಗೊಂಡು ನೈಜ ಕಲಾವಿದರಿಗೆ ಉತ್ತೇಜನ ನೀಡುವಂತಾಗಬೇಕು.

ಲಘು ಸಂಗೀತ ಕಲಾವಿದರ ರಾಜ್ಯಾಧ್ಯಕ್ಷೆ ಮಂಗಳಾ ಮಾತನಾಡಿ ಸಂಗೀತ, ನೃತ್ಯ ಹಾಗು ಇನ್ನಿತರ ಕಲಾವಿದರು ತಮ್ಮ ಜೀವನೋಪಾಯಕ್ಕಾಗಿ ಕಲೆಗಳನ್ನು ಆರಾಧಿಸುತ್ತಾ ಊರೂರು ಸುತ್ತುತ್ತಾ ಕಲೆಗಳನ್ನು ಪ್ರದರ್ಶನ ಮಾಡುತ್ತಿದ್ದರೆ, ಅಶ್ಲೀಲ ನೃತ್ಯವನ್ನು ಬಂಡವಾಳ ಮಾಡಿಕೊಂಡಿರುವ ಆರ್ಕೆಸ್ಟ್ರಾ ಕಲಾವಿದರು ಕೇವಲ ಹಣ ಮಾಡುವ ಉದ್ದೇಶಹೊತ್ತು ನಂಗಾನಾಚ್ ನಂತಹ ಕೆಟ್ಟ ಸಂಸ್ಕೃತಿಯನ್ನು ಬಿಂಬಿಸುತ್ತಿದ್ದಾರೆ. ಇಂತಹ ನೀಚ ಸಂಸ್ಕೃತಿಯನ್ನು ಸಂಪೂರ್ಣವಾಗಿ ನಿಷೇಧಿಸಿ ಉತ್ತಮ ಕಲೆಗಳ ಪ್ರದರ್ಶನಕ್ಕೆ ಒತ್ತು ನೀಡುವಂತೆ ಒತ್ತಾಯಿಸುವ  ಸಲುವಾಗಿ ಬೆಂಗಳೂರಿನ ಪೊಲೀಸ್ ಮಹಾ ನಿರ್ದೇಶಕರಿಗೆ ಮನವಿಸಲ್ಲಿಸಿ ರಾಜ್ಯದಾಧ್ಯಂತ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.

ಹೋರಾಟಕ್ಕೆ ಬೆಂಬಲಿಸಿದ ರಕ್ಷಣಾ ವೇದಿಕೆಯ ಜಿಲ್ಲಾ ಸಂಚಾಲಕಿ ಜ್ಯೋತಿ, ನಗರದ ಹಿರಿಯ ಕಲಾವಿದ ಲೋಕನಾಥ್, ಬೆಂಗಳೂರು, ದಾವಣಗೆರೆ, ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ನೂರಾರು ಕಲಾವಿದರು ಪ್ರತಿಭಟನೆಯಲ್ಲಿ ಭಾಗವಹಿಸಿ, ಅಶ್ಲೀಲ ನಂಗಾನಾಚ್ ನಂತಹ ನೃತ್ಯದಿಂದ ಹೆಣ್ಣುಮಕ್ಕಳ ಮಾನ ಹರಾಜಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ರವರು ಅನುಭವಿ ಹಿರಿಯ ಕಲಾವಿದರಾಗಿ ಇಂತಹ ನೀಚ ಕೃತ್ಯಗಳು ನಡೆಯುತ್ತಿದ್ದರು ಕಣ್ಮುಚ್ಚಿ ಕುಳಿತಿರುವುದು ದುರಂತ. ಪೊಲೀಸ್ ಇಲಾಖೆ ಕ್ರಮಕ್ಕೆ ಮುಂದಾಗಿ ಕಡಿವಾಣ ಹಾಕಬೇಕಿದೆ ಎಂದು ಒತ್ತಾಯಿಸಿ ತಹಸೀಲ್ದಾರ್ ಎಂ.ಆರ್.ನಾಗರಾಜ್ ರವರ ಮೂಲಕ ಡಿವೈಎಸ್‍ಪಿ ಹಾಗು ನಗರ ಸರ್ಕಲ್ ಇನ್ಸ್ ಪೆಕ್ಟರ್ ರವರಿಗೆ ಮನವಿ ಸಲ್ಲಿಸಿದರು.


ಸಂಬಂಧಿತ ಟ್ಯಾಗ್ಗಳು

nanganach Arkestra ಇನ್ಸ್ ಪೆಕ್ಟರ್ ಸಂಗೀತ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ