ಅನುಪಮ್ ಖೇರ್ ಟ್ವಿಟ್ಟರ್ ಖಾತೆಗೆ ಕನ್ನ…

Anupam Kher, And Two Others, twitter account Hacked

06-02-2018

ಪ್ರಸಿದ್ಧ ನಟ ಅನುಪಮ್ ಖೇರ್, ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್, ಬಿಜೆಪಿ ರಾಜ್ಯಸಭಾ ಸದಸ್ಯ ಸ್ವಪನ್ ದಾಸ್ ಗುಪ್ತ, ಆರ್ಥಿಕ ತಜ್ಞ ಕೌಶಿಕ್ ಬಸು ಅವರ ಟ್ವಿಟ್ಟರ್ ಅಕೌಂಟ್‌ಗಳನ್ನು ಹ್ಯಾಕ್ ಮಾಡಲಾಗಿದೆ. ಪಾಕ್ ಪರ ಇರುವ ಟರ್ಕಿಶ್ ಸೈಬರ್ ಆರ್ಮಿ ಅಯ್ಯಿಲ್‌ಡಿಜ್ ಟಿಮ್ ಎನ್ನುವ  ಸಂಘಟನೆ ಇದರ ಹೊಣೆ ಹೊತ್ತುಕೊಂಡಿದ್ದು, ಈ ನಾಲ್ವರೂ ಗಣ್ಯರ ಟ್ವಿಟ್ಟರ್ ಖಾತೆಯಲ್ಲಿ ಪಾಕಿಸ್ತಾನ್ ಪರ ಘೋಷಣೆಗಳನ್ನು ಹಾಕಿತ್ತು. ಇದಲ್ಲದೆ, ಇವರ ಟ್ವಿಟ್ಟರ್ ಖಾತೆಗಳಿಂದ ಹಲವು ಪತ್ರಕರ್ತರಿಗೆ ಸಂದೇಶಗಳನ್ನು ಕಳಿಸಲಾಗಿತ್ತು.

ಸದ್ಯಕ್ಕೆ, ಅಮೆರಿಕದ ಲಾಸ್ಏಂಜಲೀಸ್‌ ನಲ್ಲಿರುವ ಅನುಪಮ್ ಖೇರ್, ನನ್ನ ಟ್ವಿಟ್ಟರ್ ಅಕೌಂಟ್ ಹ್ಯಾಕ್ ಆಗಿರುವುದರ ಬಗ್ಗೆ ಸ್ನೇಹಿತರಿಂದ ತಿಳಿಯಿತು, ಆ ಬಳಿಕ ಟ್ವಿಟ್ಟರ್ ಸಂಸ್ಥೆಗೆ ನಾನು ಮಾಹಿತಿ ನೀಡಿ, ಖಾತೆ ಸ್ಥಗಿತಗೊಳಿಸಿದೆ ಎಂದು ತಿಳಿಸಿದ್ದಾರೆ.

ಇಂಟರ್ ನೆಟ್ ಮೂಲಕ ಸೈಬರ್ ದಾಳಿ ನಡೆಸುವುದು ಪಾಕ್ ಮೂಲದ ಭಯೋತ್ಪಾದಕರ ಹೊಸ ತಂತ್ರಗಾರಿಕೆಯಾಗಿದೆ. ಇವರು, ಮುಖ್ಯವಾಗಿ ಸರ್ಕಾರವನ್ನು ಗುರಿಯಾಗಿಸಿಕೊಂಡು ಸೈಬರ್ ದಾಳಿ ನಡೆಸುತ್ತಾರೆ. 2013ರಿಂದ 2016ರ ವರೆಗೂ ಭಾರತ ಸರ್ಕಾರದ 700ಕ್ಕೂ ಹೆಚ್ಚು ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡಲಾಗಿದೆ. ಕಳೆದ ವರ್ಷ, ರಾಷ್ಟ್ರಪತಿ, ಪ್ರಧಾನಿ ಸೇರಿದಂತೆ ಭಾರತದ ಅತಿಗಣ್ಯರಿಗೆ ಭದ್ರತೆ ಒದಗಿಸುವ ಎನ್‌ಎಸ್‌ಜಿ ಅಂದರೆ ನ್ಯಾಷನಲ್ ಸೆಕ್ಯುರಿಟಿ ಗಾರ್ಡ್ ಸಂಸ್ಥೆಯ ವೆಬ್‌ಸೈಟನ್ನೂ ಕತ್ತರಿಸಿದ್ದ ಸೈಬರ್ ಪಾತಕಿಗಳು, ದೇಶದ ಭದ್ರತೆಗೆ ಬೆದರಿಕೆಯೊಡ್ಡಿದ್ದರು. ತಕ್ಷಣವೇ ಎಚ್ಚೆತ್ತುಕೊಂಡಿದ್ದ ಕಂಪ್ಯೂಟರ್ ಎಮರ್ಜೆನ್ಸಿ ತಂಡ ಮುಂದಾಗಬಹುದಾಗಿದ್ದ ಅನಾಹುತಗಳನ್ನು ತಪ್ಪಿಸಿತ್ತು.


ಸಂಬಂಧಿತ ಟ್ಯಾಗ್ಗಳು

Anupam Kher Hacker ಸೈಬರ್ ವೆಬ್‌ಸೈಟ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ