ಉದ್ಯೋಗ ಸಿಗದಿದ್ದಕ್ಕೆ ಯುವಕ ಆತ್ಮಹತ್ಯೆ

unemployment: Young man committed suicide

06-02-2018

ಬೆಂಗಳೂರು: ಬೆಂಗಳೂರಿನ ಕಾಡುಗೋಡಿಯ ಪೃಥ್ವಿ ಲೇಔಟ್‍ನಲ್ಲಿ ನಿನ್ನೆ ರಾತ್ರಿ  ಆಂಧ್ರದಿಂದ ನಗರಕ್ಕೆ ಬಂದಿದ್ದ ಎಂಜಿನಿಯರೊಬ್ಬರು ಸರಿಯಾದ ಉದ್ಯೋಗ ದೊರೆಯದಿದ್ದರಿಂದ ನೊಂದು ನೇಣಿಗೆ ಶರಣಾಗಿದ್ದಾರೆ. ಆತ್ಮಹತ್ಯೆ ಮಾಡಿಕೊಂಡವರನ್ನು ಕರ್ನೂಲ್‍ನ ನವೀನ್ ಕುಮಾರ್ ರೆಡ್ಡಿ (27)ಎಂದು ಗರುತಿಸಲಾಗಿದೆ. ಏರೋನಾಟಿಕಲ್ ಪದವಿ ಮುಗಿಸಿ ನಗರಕ್ಕೆ ಉದ್ಯೋಗ ಅರಸಿ ಬಂದಿದ್ದ ರೆಡ್ಡಿ, ಪೃಥ್ವಿ ಲೇಔಟ್‍ನ ಸ್ನೇಹಿತ ಮನೆಯಲ್ಲಿ ಉಳಿದುಕೊಂಡಿದ್ದರು.

ಕಳೆದ ಕೆಲ ದಿನಗಳಿಂದ ಉದ್ಯೋಗಕ್ಕಾಗಿ ಹುಡುಕಾಟ ನಡೆಸಿದ್ದ ರೆಡ್ಡಿಗೆ ಸರಿಯಾದ ಉದ್ಯೋಗ ದೊರಕಿರಲಿಲ್ಲ. ಇದರಿಂದ ನೊಂದ ಅವರು, ನಿನ್ನೆ ಸ್ನೇಹಿತ ಕೆಲಸಕ್ಕೆ ಹೋದ ನಂತರ ಶಾಲ್‍ನಿಂದ ಸೀಲಿಂಗ್ ಫ್ಯಾನ್‍ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ರಾತ್ರಿ ಹಲವು ಬಾರಿ ಮೊಬೈಲ್‍ಗೆ ಕರೆ ಮಾಡಿದರೂ ಸ್ವೀಕರಿಸದಿದ್ದರಿಂದ ಆತಂಕಗೊಂಡ ತಾಯಿ, ಸ್ನೇಹಿತನಿಗೆ ಕರೆ ಮಾಡಿ ವಿಷಯ ತಿಳಿಸಿದ್ದು, ಸ್ನೇಹಿತ ಬಂದು ನೋಡಿದಾಗ ರೆಡ್ಡಿ ನೇಣು ಬಿಗಿದುಕೊಂಡಿರುವುದು ಕಂಡು ಬಂದಿದೆ. ಪ್ರಕರಣ ದಾಖಲಿಸಿರುವ ಕಾಡುಗೋಡಿ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

suicide unemployment ತನಿಖೆ ಸೀಲಿಂಗ್ ಫ್ಯಾನ್‍


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ