ಕಾರಲ್ಲಿ ವಾಂತಿ: ಒದೆ ತಿಂದ ಪ್ರಯಾಣಿಕ

ola cab driver abuse passengers for vomiting in car

06-02-2018

ಬೆಂಗಳೂರು: ಕಾರಿನಲ್ಲಿ ವಾಂತಿ ಮಾಡಿದ ಪ್ರಯಾಣಿಕನಿಗೆ ಓಲಾ ಚಾಲಕ ಹಿಗ್ಗಾಮುಗ್ಗಾ ಥಳಿಸಿರುವ ಅಮಾನವೀಯ ಕೃತ್ಯ ನಿನ್ನೆ ರಾತ್ರಿ ಬೆಂಗಳೂರಿನ ಕೋಗಿಲು ಕ್ರಾಸ್‍ನಲ್ಲಿ ನಡೆದಿದೆ. ಪ್ರಯಾಣಿಕನ ಮೇಲೆ ಹಲ್ಲೆ ನಡೆಸಿದ ಓಲಾ ಚಾಲಕ ನಂದೀಶ್‍ನ್ನು ಯಲಹಂಕ ಪೊಲೀಸರು ಬಂಧಿಸಿದ್ದಾರೆ.

ಹೆಬ್ಬಾಳದಲ್ಲಿ ಓಲಾ ಕ್ಯಾಬ್ ಹತ್ತಿ ದೇವನಹಳ್ಳಿಗೆ ಹೋಗುತ್ತಿದ್ದ ಸರ್ಜಿತ್ ಮತ್ತು ನಿತಿನ್ ಅವರಲ್ಲಿ ಸರ್ಜಿತ್ ಕ್ಯಾಬ್ ಕೊಡಿಗೇಹಳ್ಳಿ ಬಳಿ ಕಾರಿನಲ್ಲಿ ವಾಂತಿ ಮಾಡಿಕೊಂಡಿದ್ದಾನೆ. ಇದರಿಂದ ಕೋಪಗೊಂಡ ಚಾಲಕ ನಂದೀಶ್, ಪೆಟ್ರೋಲ್ ಬಂಕ್ ಒಂದರ ಬಳಿ ಕಾರು ನಿಲ್ಲಿಸಿ ತೊಳೆಯುವಂತೆ ಸೂಚಿಸಿದ್ದಾನೆ. ಒಪ್ಪದಿದ್ದಾಗ ಜಾಕ್ ರಾಡ್‍ನಿಂದ ಮನಬಂದಂತೆ ಥಳಿಸಿದ್ದಾನೆ.

ಗಾಯಾಳು ಸರ್ಜಿತ್‍ಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಸರ್ಜಿತ್ ಮತ್ತು ನಿತಿನ್ ಇಬ್ಬರು ಪಾನಮತ್ತರಾಗಿದ್ದರು ಎಂದು ತಿಳಿದುಬಂದಿದೆ. ಈ ಸಂಬಂಧ ಪ್ರಕರಣ ದಾಖಲಿಸಿದ ಯಲಹಂಕ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

ola cab driver ಪ್ರಯಾಣಿಕ ಪೊಲೀಸರು


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ