ವಿಧಾನಪರಿಷತ್ ನಲ್ಲಿ ಬಿಜೆಪಿ ಪ್ರತಿಭಟನೆ

BJP protests in assembly against congress

06-02-2018

ಬೆಂಗಳೂರು: ರಾಜ್ಯ ವಿಧಾನಸಭೆ ಅಧಿವೇಶನದಲ್ಲಿ ಬಿಜೆಪಿ ಮತ್ತು ಕಾಂಗ್ರಸ್ನ ಆರೋಪ ಪ್ರತ್ಯಾರೋಪಗಳು ಜೋರಾಗೆ ನಡೆದಿವೆ. ಇಂದಿನ ಅಧಿವೇಶನದ ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಸದಸ್ಯ ಕೋಟ ಶ್ರೀನಿವಾಸ್ ಪೂಜಾರಿ ಅವರು ಕಲ್ಲಡ್ಕ ಶಾಲೆಯಲ್ಲಿ ಬಿಸಿಯೂಟ ನಿಲ್ಲಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ‌ಶ್ರೀನಿವಾಸ್ ಪೂಜಾರಿ ಮಾತಿಗೆ ಧ್ವನಿ ಸೇರಿಸಿದ ಬಿಜೆಪಿ ಸದಸ್ಯರಾದ ರಾಮಚಂದ್ರೇಗೌಡ, ಕೆ‌.ಎಸ್.ಈಶ್ವರಪ್ಪ, ಗಣೇಶ್ ಕಾರ್ಣಿಕ್, ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಅಲ್ಲದೇ ಆಡಳಿತ ಮಂಡಳಿ ಮೇಲಿನ ದ್ವೇಷಕ್ಕೆ ಬಿಸಿಊಟ ನಿಲ್ಲಿಸಿದ್ದು ಸರಿಯಲ್ಲ, ಕಳೆದ 4 ವರ್ಷಗಳಿಂದ ಮುಜುರಾಯಿ‌ ಇಲಾಖೆಯಿಂದ ದೇವಸ್ಥಾನದ ಶಾಲೆಗಳಿಗೆ ಊಟ ನೀಡುತ್ತಿದ್ದು, ಈಗ ನಿಲ್ಲಿಸಿದ್ದು ಸರಿಯಿಲ್ಲ ಎಂದರು.

ಇದಕ್ಕೆ ಉತ್ತರ ನೀಡಿದ ಸಚಿವ ರುದ್ರಪ್ಪ ಲಮಾಣಿ, ಮುಜುರಾಯಿ ಇಲಾಖೆಯಿಂದ ಬಿಸಿಯೂಟ ನೀಡಲು ಅವಕಾಶವಿಲ್ಲ, ಶಿಕ್ಷಣ ಇಲಾಖೆಯಿಂದ ಅವಕಾಶವಿದೆ ಇದನ್ನು ಸರ್ಕಾರದ‌ ಗಮನಕ್ಕೆ ತರಲಾಗಿದೆ ಎಂದು ಹೇಳಿದ್ದು, ಸಚಿವರ ಉತ್ತರದಿಂದ ಸಮಾಧಾನಗೊಳ್ಳದ ಬಿಜೆಪಿ‌ ಸದಸ್ಯರು ಪ್ರತಿಭಟಿಸಿದರು. ಕೊಲ್ಲೂರು ದೇವಸ್ಥಾನದಿಂದ ಬಿಸಿಯೂಟ ಶಾಲೆಗೆ ಕೊಡಬೇಕು ಎಂದು ಪಟ್ಟು ಹಿಡಿದ ಬಿಜೆಪಿ ಸದಸ್ಯರು, ಸಭಾಪತಿ ಮುಂಭಾಗ ಧರಣಿ ನಡೆಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ