ಹೆಸರು ಬದಲಿಸಿಕೋ ಎಂದಿದ್ದರು!

They told to change my name :A.R.Rahman

06-02-2018

ನೀನು ಬಾಲಿವುಡ್‌ ನಲ್ಲಿ ಏನಾದರೂ ಸಾಧನೆ ಮಾಡಬೇಕು ಎಂದಿದ್ದರೆ, ಮೊದಲು ನಿನ್ನ ಹೆಸರು ಬದಲಾಯಿಸಿಕೋ ಎಂದು ಕೆಲವರು ಇವರಿಗೆ ಹೇಳಿದ್ದರಂತೆ. ಆದರೆ, ಆನಂತರದ ದಿನಗಳಲ್ಲಿ ಬಾಲಿವುಡ್, ಕೊಲ್ಲಿವುಡ್, ಮಾಲಿವುಡ್ ಮತ್ತು ಹಾಲಿವುಡ್‌ಗಳಲ್ಲೂ ಮಿಂಚಿ ಸಿನೆಮಾರಂಗದ ಪ್ರತಿಷ್ಠಿತ ಆಸ್ಕರ್‌ ಪ್ರಶಸ್ತಿಯನ್ನೂ ಗಳಿಸಿಕೊಂಡವರು ಹೆಸರಾಂತ ಸಂಗೀತ ನಿರ್ದೇಶಕ ಎ.ಆರ್.ರಹಮಾನ್.

ದಕ್ಷಿಣ ಭಾರತದಿಂದ ಬಂದವರು ಯಾರೂ ಕೂಡ, ಬಾಲಿವುಡ್‌ನ ಸಂಗೀತ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಲು ಸಾಧ್ಯವಿಲ್ಲ ಎನ್ನುವ ಮಾತನ್ನೂ ಮುಂಬೈನಲ್ಲಿ ಕೇಳಿಸಿಕೊಂಡಿದ್ದ ಎ.ಆರ್.ರಹಮಾನ್, ತಮ್ಮ ಪ್ರತಿಭೆಯಿಂದ ಆ ಮಾತನ್ನು ಸುಳ್ಳು ಮಾಡಿ, ಇಡೀ ಭಾರತದ ಕಣ್ಮಣಿಯಾದರು.

1992ರಲ್ಲಿ ಮಣಿರತ್ನಮ್ ಅವರ ಸೂಪರ್ ಹಿಟ್ ರೋಜಾ ಚಿತ್ರಕ್ಕೆ ಸಂಗೀತ ನೀಡುವ ಮೂಲಕ ಸಿನೆಮಾ ರಂಗಕ್ಕೆ ಎಂಟ್ರಿ ಕೊಟ್ಟ ರಹಮಾನ್, ತಮ್ಮ ಅದ್ಭುತ ಸಂಗೀತ ನಿರ್ದೇಶನದಿಂದ ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ಜನರನ್ನು ರಂಜಿಸುತ್ತಾ ಬಂದಿದ್ದಾರೆ.


ಸಂಬಂಧಿತ ಟ್ಯಾಗ್ಗಳು

A.R.Rahman Mani Ratnam ಬಾಲಿವುಡ್ ಹಾಲಿವುಡ್‌


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ