ನಾಡ ಪಿಸ್ತೂಲ್ ಮಾರಾಟಕ್ಕೆ ಯತ್ನ

A man trying to sell Pistol: police arrested

06-02-2018

ಬೆಂಗಳೂರು: ಅಕ್ರಮವಾಗಿ ನಾಡ ಪಿಸ್ತೂಲ್‌ ಮಾರಟ ಮಾಡಲು ಯತ್ನಿಸುತ್ತಿರುವವನನ್ನು ಪೊಲೀಸರು ಬಂಧಿಸಿದ್ದಾರೆ. ಭರತ್ ಸಿಂಗ್ (22)ಬಂಧಿತ ಆರೋಪಿ. ಬಂಧಿತನಿಂದ ಒಂದು ಪಿಸ್ತೂಲ್ 3 ಜೀವಂತ ಗುಂಡಗಳನ್ನು ವಶಪಡಿಸಿಕೊಂಡಿದ್ದಾರೆ. ಈತ ಮೂಲತ: ಮಧ್ಯಪ್ರದೇಶವನೆಂದು ತಿಳಿದು ಬಂದಿದೆ.  ಬೆಂಗಳೂರಿನ ಆರ್.ಎಂ.ಸಿಯಾರ್ಡ್ನ ಪೊಲೀಸರ ಕಾರ್ಯಾಚರಣೆಯಿಂದ ಆರೋಪಿ ಸಿಕ್ಕಿಬಿದ್ದಿದ್ದಾನೆ.

ನಿನ್ನೆ ರಾತ್ರಿ ನಗರದ ಯಶವಂತಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಿಸ್ತೂಲ್ ಮಾರಲು ಹೊಂಚು ಹಾಕುತ್ತಿದ್ದು, ಈತನ ವರ್ತನೆಯಿಂದ ಅನುಮಾನಗೊಂಡ ಪೊಲೀಸರು ವಿಚಾರಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಪ್ರಸ್ತುತ ಈತ ಬೆಂಗಳೂರಿನ ಮಾಗಡಿ ಹತ್ತಿರ ವಾಸವಿದ್ದು, ಕಳೆದ ಬಾರಿ ಊರಿಗೆ ಹೋಗಿದ್ದಾಗ 20 ಸಾವಿರಕ್ಕೆ ಪಿಸ್ತೂಲ್ ತಂದಿರುವುದಾಗಿ ತಿಳಿದು ಬಂದಿದೆ.

ಇನ್ನು ‌ಪಿಸ್ತೂಲ್ ಅನ್ನು 50 ಸಾವಿರಕ್ಕೆ ಮಾರಟ ಮಾಡಲು ಗಿರಾಕಿ ಹುಡುಕುತ್ತಿದ್ದಾಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಪ್ರಕರಣ ದಾಖಲಿಸಿ ಭರತ್ನನ್ನು ವಶಕ್ಕೆ ಪಡೆದಿರುವ ಪೊಲೀಸರು ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ