ದಿಕ್ಕಾಪಾಲಾಗಿ ಓಡಿದ ಜೂಜುಕೋರರು

police raid on Gambling spots in mandya

06-02-2018

ಮಂಡ್ಯ: ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ನಡೆಯುವ ಗುಡಿಸರಗೂರು ಜಾತ್ರೆ ಹಿನ್ನೆಲೆ, ಸಾವಿರಾರು ಜನರು ಸೇರಿದ್ದು, ಜಾತ್ರೆಗೆಂದು ಸೇರಿದ ಜನರಲ್ಲಿ ಹಲವರು ಜೂಜಾಟದಲ್ಲಿ ತೊಡಗಿಕೊಂಡಿದ್ದ ಮಾಹಿತಿಯನ್ನಾಧರಿಸಿ ಪೊಲೀಸರು ಜೂಜು ಅಡ್ಡೆಗಳ ಮೇಲೆ ದಾಳಿ ನಡೆಸಿದ್ದಾರೆ. ದಾಳಿ ವೇಳೆ ಜೂಜುಕೋರರು ದಿಕ್ಕಾಪಾಲಾಗಿ ಓಡಿದ್ದಾರೆ. ಮಂಡ್ಯ ಜಿಲ್ಲೆ, ಮಳವಳ್ಳಿ ತಾಲ್ಲೂಕಿನ, ಹಲಗೂರು ಗಡಿಭಾಗದಲ್ಲಿ ಜೂಜಾಡುತ್ತಿದ್ದ ಜೂಜುಕೋರರು ತಪ್ಪಿಸಿಕೊಂಡು ಓಡಿದ್ದಾರೆ.

ಸುಮಾರು 30 ಗುಂಪುಗಳಲ್ಲಿ ಜೂಜಾಡುತ್ತಿದ್ದ ನೂರಾರು ಜನರು, ಪೊಲೀಸರನ್ನು ನೋಡುತ್ತಿದ್ದಂತೆ ಕಾಲ್ಕಿತ್ತಿದ್ದಾರೆ. ಹಲಗೂರು ಪೊಲೀಸ್ ಠಾಣೆಯ ಪಿಎಸ್ಐ ಶ್ರೀಧರ್ ನೇತೃತ್ವದಲ್ಲಿ ದಾಳಿ ಕೈಗೊಂಡಿದ್ದರು. ಇದೀಗ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಸಂಬಂಧಿತ ಟ್ಯಾಗ್ಗಳು

Gambling Jatre ಡಿಭಾಗ ಜೂಜಾಟ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ