ಲಕ್ಷ್ಮೀ ಹೆಬ್ಬಾಳ್ಕರ್ ಮತಬೇಟೆ ಶುರು

Lakshmi Hebbalkar gifted cooking items for women voters...!

06-02-2018

ಬೆಳಗಾವಿ: ರಾಜ್ಯದಲ್ಲಿ ಚುನಾವಣಾ ಕಾವು ಹೆಚ್ಚಾಗುತ್ತಿದ್ದಂತೆ ಮತಬೇಟೆ ಶುರುವಾಗಿದೆ. ಅದರಂತೆ ಬೆಳಗಾವಿ ಗ್ರಾಮೀಣ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಿಂದ ಮತದಾರರಿಗೆ ಬಂಪರ್ ಉಡುಗೊರೆ ನೀಡಿದ್ದಾರೆ. ಬೆಳಗಾವಿ ಗ್ರಾಮೀಣ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಹಾಗು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆಯಾಗಿರುವ ಲಕ್ಷ್ಮೀ‌ ಹೆಬ್ಬಾಳ್ಕರ್ ಮತದಾರರ ಒಲೈಕೆಗೆ ಕಸರತ್ತು ನಡೆಸಿದ್ದಾರೆ.  ಕ್ಷೇತ್ರದಲ್ಲಿನ ಮಹಿಳಾ ಮತದಾರನ್ನು ಸೆಳೆಯಲು ಅಡುಗೆ ಸಾಮಗ್ರಿಗಳನ್ನು ವಿತರಿಸಿದ್ದಾರೆ. ಅಡುಗೆ ಸಾಮಗ್ರಿಗಳಲ್ಲದೇ ಗಿಫ್ಟ್ ಬಾಕ್ಸ್ ಗಳನ್ನೂ ನೀಡಿದ್ದು, ಗಿಫ್ಟ್ ಬಾಕ್ಸ್ಗಳ ಮೇಲೆ ಲಕ್ಷ್ಮೀ‌ ಹೆಬ್ಬಾಳ್ಕರ್ ಅವರ ಭಾವಚಿತ್ರ ಇರುವುದು ಕಂಡುಬಂದಿದೆ. ಮಹಿಳಾ ಮತದಾರರಿಗೆ ಅಡುಗೆ ಸಾಮಗ್ರಿಗಳ ಬಾಕ್ಸ್ ವಿತರಿಸುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದ್ದು,  ಹಸ್ತಕ್ಕೆ ಮತ್ತು ತಮಗೆ ಮತ ನೀಡುವಂತೆ ಲಕ್ಷ್ಮೀ ಹೆಬ್ಬಾಳ್ಕರ್ ಈರೀತಿಯ ಮತಬೇಟೆ ಶುರುಮಾಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Lakshmi Hebbalkar KPCC ಮತಬೇಟೆ ಮತಕ್ಷೇತ್ರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ