ಪಾಠಕ್ಕೆ ಚಕ್ಕರ್ ಪಾರ್ಟಿಗೆ ಹಾಜರ್..!

alcoholic govt school headmaster in vijayapura

05-02-2018

ವಿಜಯಪುರ: ಶಾಲಾ ಅವಧಿಯಲ್ಲೇ ಸಹ ಶಿಕ್ಷಕರೊಂದಿಗೆ ಶಾಲೆಗೆ ಚಕ್ಕರ್ ಹೊಡೆದು ಬಾಡೂಟಕ್ಕೆ ಮುಖ್ಯೋಪಾಧ್ಯಾಯ ತೆರಳಿರುವ ಘಟನೆ ವಿಜಯಪುರದಲ್ಲಿ ಬೆಳಕಿಗೆ ಬಂದಿದೆ. ಅದಲ್ಲದೇ ಮದ್ಯದ ಅಮಲಿನಲ್ಲೇ ಬಿಇಓಗೆ ಅವಾಚ್ಯ ಪದಗಳಿಂದ ನಿಂದಿಸಿ ಉದ್ದಟತನ ತೋರಿದ್ದಾನೆ.

ವಿಜಯಪುರದ ಮುದ್ದೇಬಿಹಾಳ ತಾಲ್ಲೂಕಿನ ರಕ್ಕಸಗಿ ಸರ್ಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಎ.ಹೆಚ್.ಬಿರಾದಾರ್ ಈ ರೀತಿಯ ದುರ್ವರ್ತನೆ ತೋರಿದ್ದಾನೆ. ಶಾಲೆಗೆ ಅನಧೀಕೃತ ರಜೆ ಕೊಟ್ಟು, ಹೊಲದಲ್ಲಿ ಕುಳಿತು ಪಾರ್ಟಿ ಮಾಡುತ್ತಿರುವುದೇಕೆ ಎಂದು ಗ್ರಾಮಸ್ಥರು ತರಾಟೆಗೆ ತೆಗೆದುಕೊಡಿಂದ್ದಾರೆ. ಆದರೆ ಕುಡಿದ ಅಮಲಿನಲ್ಲಿ ನಾನು ಸುರಪುರದ ದೊರೆ, ಯಾರೇನು ಮಾಡ್ತಾರೆ ಎಂದು ಧಮಕಿ ಹಾಕಿದ್ದಾನೆ. ಈ ವೇಳೆ ಪಾಲಕರೊಂದಿಗೆ ಮುಖ್ಯೋಪಾಧ್ಯಾಯ ನಡುವೆ ವಾಗ್ವಾದವೂ ನಡೆದಿದೆ. ಇಷ್ಟೆಲ್ಲಾ ಆದಮೇಲೆ ಮುಖ್ಯೋಪಾಧ್ಯಾಯನ ಅಮಾನತ್ತಿಗೆ ಡಿಡಿಪಿಐಗೆ ಶಾಸಕ ಸಿ.ಎಸ್.ನಾಡಗೌಡ ಸೂಚನೆ ನೀಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Head master school ಮುಖ್ಯೋಪಾಧ್ಯಾಯ ಡಿಡಿಪಿಐ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ