ಹಣ ದೋಚಲು ಎಟಿಎಂಗೆ ನುಗ್ಗಿದ ಕಳ್ಳರು

Thieves attempted to steal ATM machine

05-02-2018

ಬೆಂಗಳೂರು: ತಲಘಟ್ಟಪುರದ ಆವಲಹಳ್ಳಿಯ ಎಟಿಎಂ ಕೇಂದ್ರವೊಂದಕ್ಕೆ ನಿನ್ನೆ ಮಧ್ಯರಾತ್ರಿ ನುಗ್ಗಿರುವ ದುಷ್ಕರ್ಮಿಗಳು ಹಣ ದೋಚಲು ವಿಫಲಯತ್ನ ನಡೆಸಿ ಪರಾರಿಯಾಗಿದ್ದಾರೆ. ಆವಲಹಳ್ಳಿಯ ಆಕ್ಸಿಸ್ ಬ್ಯಾಂಕ್‍ನ ಎಟಿಎಂ ಕೇಂದ್ರಕ್ಕೆ ರಾತ್ರಿ 1ರ ಸುಮಾರಿನಲ್ಲಿ ನುಗ್ಗಿರುವ ದುಷ್ಕರ್ಮಿಗಳು ಎಟಿಎಂ ಯಂತ್ರವನ್ನು ಒಡೆದು ಹಣ ದೋಚಲು ಯತ್ನಿಸಿದ್ದು, ದುಷ್ಕರ್ಮಿಗಳ ಪ್ರಯತ್ನ ವಿಫಲವಾಗಿ ಹೆದರಿ ಪರಾರಿಯಾಗಿದ್ದಾರೆ.

ರಾತ್ರಿ 12.15ರ ವೇಳೆ ಗಸ್ತು ತಿರುಗುತ್ತಿದ್ದ ಪೊಲೀಸರು, ಎಟಿಎಂ ಕೇಂದ್ರದ ಬಳಿ ಬಂದು ಹೋದ ನಂತರ ಹಣ ದೋಚಲು ಯತ್ನಿಸಿದ್ದಾರೆ. ಈ ಕುರಿತಂತೆ ಪ್ರಕರಣ ದಾಖಲಿಸಿರುವ ತಲಘಟ್ಟಪುರ ಪೊಲೀಸರು, ಎಟಿಎಂ ಕೇಂದ್ರದಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ದುಷ್ಕರ್ಮಿಗಳ ಪತ್ತೆಗಾಗಿ ಶೋಧ ನಡೆಸಿದ್ದಾರೆ ಎಂದು ಡಿಸಿಪಿ ಡಾ.ಶರಣಪ್ಪ ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

ATM Machine ಡಿಸಿಪಿ ವಿಫಲ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ