ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣ

Governor

05-02-2018

ಬೆಂಗಳೂರು: ಜಂಟಿ ಅಧಿವೇಶನದಲ್ಲಿ ತಮ್ಮೆಲ್ಲರನ್ನು ಉದ್ದೇಶಿಸಿ ಮಾತಾಡುವುದು ನನ್ನ ಸೌಭಾಗ್ಯ ಎಂದು ರಾಜ್ಯಪಾಲರಾದ ವಜುಭಾಯಿ ವಾಲಾ ಅವರು ಹೇಳಿದ್ದಾರೆ. ರಾಜ್ಯದ ಉಭಯ ಸದನಗಳನ್ನು ಉದ್ದೇಶಿಸಿ ಭಾಷಣ ಮಾಡಿದ ಅವರು, ನನ್ನ ಸರಕಾರವು ಬಡವರ, ಅವಕಾಶ ವಂಚಿತರ, ದುರ್ಬಲರ ಅಭಿವೃದ್ಧಿಗೆ ಬದ್ಧವಾಗಿದೆ. ಕಳೆದ ಐದು ವರ್ಷಗಳಲ್ಲಿ ನನ್ನ ಸರ್ಕಾರ ಆರ್ಥಿಕ ಅಭಿವೃದ್ಧಿ ಸಾಧಿಸುವಲ್ಲಿ ಹೆಜ್ಜೆ ಇರಿಸಿದೆ ಎಂದು ಹೇಳಿದ್ದಾರೆ.

ಸಮಾಜದ ಎಲ್ಲ ವರ್ಗದವರಿಗೂ ಸಾಮಾಜಿಕ ನ್ಯಾಯ ಮತ್ತು ಕಲ್ಯಾಣ ದೊರಕಿಸಿಕೊಡುವಲ್ಲಿ ಸರ್ಕಾರ ಗಮನಾರ್ಹ ಕಾರ್ಯಗಳನ್ನು ಮಾಡಿದೆ. ಸರ್ಕಾರವು ಹಸಿವು ಮುಕ್ತ ಕರ್ನಾಟಕದ ಗುರಿ ತಲುಪುವಲ್ಲಿ ಪ್ರಗತಿ ಸಾಧಿಸಿದ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಹಲವು ಪರಿಣಾಮಕಾರಿ ಕ್ರಮಗಳನ್ನು ಸರ್ಕಾರ ತೆಗೆದುಕೊಂಡಿದೆ, ಕೋಮು ಹಿಂಸಾ ಘಟನೆಗಳ ತಡೆಯಲು ದೃಢ ಕ್ರಮಗಳನ್ನು ಕೈಗೊಂಡಿದೆ ಎಂದು, ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬ ಆರೋಪ ಮಾಡುತ್ತಿದ್ದ ಬಿಜೆಪಿಗೆ ರಾಜ್ಯಾಪಾಲರ ಮೂಲಕವೇ ಟಾಂಗ್ ನೀಡಿದೆ.

ಇನ್ನು ಮಹದಾಯಿ ನೀರನ್ನು ರಾಜ್ಯದ ಜನತೆಗೆ ದೊರಕಿಸಿಕೊಡಲು ಸರ್ಕಾರ ಎಲ್ಲ ರೀತಿಯ ಪ್ರಯತ್ನಗಳನ್ನು ಮುಂದುವರೆದಿದೆ ಎಂದು ಹೇಳಿದರು. ಅದಲ್ಲದೇ ಪ್ರಾದೇಶಿಕ ಅಸಮತೋಲನ. ನಿವಾರಣೆಗೆ ಸರ್ಕಾರ ಕ್ರಮ ಕೈಗೊಂಡಿದೆ. ನಂಜುಂಡಪ್ಪ ವರದಿ ಅನುಷ್ಠಾನಗೊಳಿಸಲು ಐದು ವರ್ಷಗಳ ವಿಶೇಷ ಅಭಿವೃದ್ಧಿ ಯೋಜನೆ ಮುಂದುವರೆಸಿದೆ. ಸಂವಿಧಾನದ 371(ಜೆ) ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಮೂಲಕ ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಕ್ರಮ ಕೈಗೊಳ್ಳಲಾಗಿದೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಾಧನೆಗೆ  ರಾಷ್ಟ್ರೀಯ ಇ-ಪುರಸ್ಕಾರ ಲಭಿಸಿದೆ ಎಂದು ತಮ್ಮ ಭಾಷಣದಲ್ಲಿ ತಿಳಿಸಿದ್ದಾರೆ.

ಸರ್ಕಾರದಿದಂದ ಪೊಲೀಸ್ ಇಲಾಖೆ ಮತ್ತು ಸಿಬ್ಬಂದಿ ಕಲ್ಯಾಣಕ್ಕೆ ಕ್ರಮ ಕೈಗೊಳ್ಳಲಾಗಿದ್ದು, 2014ರಿಂದಲೂ ಪ್ರಮುಖ ಪೊಲೀಸ್ ಹುದ್ದೆಗಳ ಭರ್ತಿಗೆ ಕ್ರಮ ತೆಗೆಉಕೊಂಡಿದೆ ಎಂದರು. ಸರ್ಕಾರದಿಂದ ಸಾರ್ವಜನಿ ಸೇವೆಗಳಲ್ಲಿರುವ ಭ್ರಷ್ಟಾಚಾರದ ವಿರುದ್ಧ ಹೋರಾಟ, ಇ-ಆಡಳಿತ ಸೇವೆಗಳಿಂದ ಪಾರದರ್ಶಕತೆ ಮತ್ತು ಭ್ರಷ್ಟಾಚಾರ ಪ್ರಕರಣಗಳ ನಿರ್ವಹಣೆಗೆ ಎಸಿಬಿ ದಳ ರಚನೆ ಮಾಡಲಾಗಿದೆ ಎಂದರು.

ಹೈದರಬಾದ್ ಕರ್ನಾಟಕ ಭಾಗದಲ್ಲಿ ಪ್ರಾದೇಶಿಕ ಅಸಮತೋಲನ ತೊಲಗಿಸಲು ಆ ಭಾಗದ ಜನರಿಗೆ ಉದ್ಯೋಗ ಮೀಸಲಾತಿ ನೀಡಿ ಐತಿಹಾಸಿಕ ಕ್ರಮ ಕೈಗೊಂಡಿದೆ. ಹೈ-ಕ ಭಾಗದಲ್ಲಿ ಒಟ್ಟು 18,993 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಸರ್ಕಾರ ಭರ್ತಿ ಮಾಡಿದೆ ಎಂದರು.

ಬರ ಮುಕ್ತ ಕರ್ನಾಟಕ ಮಾಡಲು ಸರ್ಕಾರ ಹಲವು ಕ್ರಮಗಳಿಗೆ ಮುಂದಾಗಿದ್ದು, ಮಳೆ ಆಶ್ರಿತ ಕೃಷಿಕರಿಗಾಗಿ ಸರಕಾರ ಕೃಷಿ ಭಾಗ್ಯ ಸೇರಿಂತೆ ಹಲವಾರು ಯೋಜನೆಗಳನ್ನು ನೀಡಿದೆ ಎಂದು ಭಾಷಣದಲ್ಲಿ ಹೇಳಿದ್ದಾರೆ.

ಇನ್ನು  2017ರ ಜುಲೈ 1ರಿಂದ ರಾಜ್ಯದಲ್ಲಿ ಜಿಎಸ್ಟಿ ಜಾರಿ ಮಾಡಿದ ಸರ್ಕಾರವು, ಕಳೆದ ಐದು ವರ್ಷಗಳಿಂದ ರಾಜಸ್ವ ಹೆಚ್ಚುವರಿ ಉಳಿಸಿಕೊಂಡು ಬಂದಿದೆ ಎಂದರು. ನೂತನ ಜವಳಿ ನೀತಿ 2013-18 ಘೋಷಿಸಿದೆ, ಈ ನೀತಿಯಡಿ 4,954 ಹೂಡಿಕೆ, 1.3 ಲಕ್ಷ ಜನರಿಗೆ ಉದ್ಯೋಗದ ಗುರಿ ಹೊಂ ದಿದೆ ಎಂದರು.

ಬಂಡವಾಳ ಹೂಡಿಕೆ ರಾಜ್ಯಗಳಲ್ಲಿ ಕರ್ನಾಟಕ ನಂಬರ್ 1 ಸ್ಥಾನಕ್ಕೇರಿದೆ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನಗಳಲ್ಲೂ ರಾಜ್ಯ ದೇಶದಲ್ಲೇ ನಂಬರ್ ಒನ್ ಎಂದು ಹೇಳಿದ್ದಾರೆ.

ಎಸ್ಸಿ/ಎಸ್ಟಿ ಉಪಯೋಜನೆ ಮತ್ತು ಗಿರಿಜನರ ಉಪಯೋಜನೆಗಳನ್ನು ಸಮರ್ಥವಾಗಿ ಜಾರಿ ಮಾಡಿದ್ದು, 2,900ಕೋಟಿ ರೂ.ಗಳ ವೆಚ್ಚದಲ್ಲಿ ಎಸ್ಸಿ/ಎಸ್ಟಿ ಕಾಲೋನಿಗಳಲ್ಲಿ 2,663 ಕಿ.ಮೀ ರಸ್ತೆ ನಿರ್ಮಾಣ ಮಾಡಿದ್ದಾರೆ ಎಂದರು.

ಪ್ರುಮುಖವಾಗಿ ರಾಜ್ಯಪಾಲರ ಭಾಷಣದಲ್ಲಿ ಜಿ.ಎಸ್.ಟಿ ಸಂಗ್ರಹಣೆಯಲ್ಲಿ ಏರಿಳಿತದ ಬಗ್ಗೆ ಪ್ರಸ್ತಾಪಿಸಿದ್ದು, ಜಿ.ಎಸ್.ಟಿಯನ್ನು ನಾವು ಸಂಪೂರ್ಣವಾಗಿ ಅಳವಡಿಸಲು ಸಿದ್ಧರಿದ್ದರೂ ಜಿ.ಎಸ್.ಟಿ ಅಡಿಯಲ್ಲಿ ರೂಪಿಸಿರುವ ಕಾನೂನು ಅವಶ್ಯಕತೆಗಳನ್ನು ಎಸ್.ಐ.ಟಿ ವೇದಿಕೆಯಲ್ಲಿ ಪೂರೈಸುವಲ್ಲಿ ತೆರಿಗೆದಾರರು ಹಲವು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಇದರ ಜೊತೆ ಪ್ರಾರಂಭಿಕ ತಿಂಗಳುಗಳಲ್ಲಿ ಹಲವು ಬದಲಾವಣೆಗಳಾಗಿವೆ, ಹೀಗಾಗಿ ಜಿ.ಎಸ್.ಟಿ ಸಂಗ್ರಹಣೆಯಲ್ಲಿ ಏರಿಳಿತವಾಗುತ್ತಿದೆ. ಆದರೆ ನಿಯಮದನುಸಾರ ಕೇಂದ್ರದಿಂದ ಬರಬೇಕಾದ ನಷ್ಟ ಪರಿಹಾರದ ಮೂಲಕ ಕೊರತೆಯನ್ನು ನೀಗಿಸಬಹುದಾಗಿದೆ ಎಂದರು.

ರಾಜ್ಯವು ಕೆಲವು ವರ್ಷಗಳಿಂದ ಬಾಕಿ ಇರುವ ಅನೇಕ ವಸ್ತುಗಳ ಬೆಲೆಯನ್ನು ಪರಿಷ್ಕರಿಸುವ ಕಾರ್ಯ ಕೈಗೊಂಡಿದೆ. ಇಲಾಖೆಗಳೊಂದಿಗೆ ತೆರಿಗೇಯೇತರ ಸಂಗ್ರಹಣೆ ಹೆಚ್ಚಿಸಲು ಸಹ ಪ್ರಯತ್ನ ನಡೆದಿದೆ. ಇಂತಹ ಕ್ರಮಗಳು ರಾಜ್ಯದ ಆರ್ಥಿಕತೆಗೆ ಲಾಭ ತರಲಿವೆ ಎಂದು ನಿರೀಕ್ಷಿಸಲಾಗಿದೆ ಎಂದು ಹೇಳಿದರು.

ಇನ್ನು ರಾಜ್ಯಪಾಲರು ತಮ್ಮ ಭಾಷಣದಲ್ಲಿ ಇಂದಿರಾ ಕ್ಯಾಂಟಿನ್ ಗಳ ಬಗ್ಗೆ ಪ್ರಸ್ತಾಪಿಸಿದ್ದು, ಬೆಂಗಳೂರಿನಲ್ಲಿ ಆರಂಭಿಸಿರುವ ಇಂದಿರಾ ಕ್ಯಾಂಟೀನ್ಗಳಿಗೆ ಜನರಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ. ಅದರಂತರ ಎಲ್ಲಾ ಜಿಲ್ಲಾ, ತಾಲ್ಲೂಕು, ನಗರ ಸ್ಥಳೀಯ ಸಂಸ್ಥೆಗಳಲ್ಲೂ 247 ಇಂದಿರಾ ಕ್ಯಾಂಟೀನ್ಗಳನ್ನು ತೆರೆಯಲಾಗ್ತಿದೆ ಎಂದರು.

ಸರ್ಕಾರ ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಅಧಿನಿಯಮದ ಎಲ್ಲಾ ಅಗತ್ಯತೆ ಪೂರೈಸಿದೆ‌. ಕಳೆದ ಐದು ವರ್ಷಗಳಲ್ಲಿ ಸತತವಾಗಿ ರಾಜಸ್ವ ಹೆಚ್ಚುವರಿ ಉಳಿಸಿಕೊಂಡು ಬಂದಿದೆ. ಆರ್ಥಿಕ ಕೊರತೆಯನ್ನು ರಾಜ್ಯ ಆಂತರಿಕ ಒಟ್ಟು ಉತ್ಪನ್ನದ ಶೆ.3ಕ್ಕಿಂತ ಕಡಿಮೆ  ಹಾಗೂ ಒಟ್ಟಾರೆ ಹೊಣೆಗಾರಿಕೆಯನ್ನು ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ ಶೆಕಡಾ 25% ರೊಳಗೆ ಇರುವಂತೆ ಖಚಿತಪಡಿಸಿಕೊಳ್ಳುವ ಮೂಲಕ ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಅಧಿನಿಯಮದ ಎಲ್ಲಾ ಅಗತ್ಯತೆ ಪೂರೈಸಲಾಗಿದೆ ಎಂದ ತಮ್ಮ ಧೀರ್ಘ ಭಾಷಣದಲ್ಲಿ ಪ್ರಮುಖ ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Vajubhai Vala Governor ಭಾಷಣ ಜಿ.ಎಸ್.ಟಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ