ಇಕ್ಬಾಲ್ ಅನ್ಸಾರಿಗೆ ಮಹಿಳೆಯರ ಘೇರಾವ್..!

women

05-02-2018

ಕೊಪ್ಪಳ: ಕೊಪ್ಪಳದ ಗಂಗಾವತಿ ನಗರದ 28ನೇ ವಾರ್ಡಿನಲ್ಲಿ ವಿವಿಧ ಕಾಮಗಾರಿಗಳ ಪರಿಶೀಲನೆ, ಹಾಗೂ ವಾರ್ಡ್ ನಲ್ಲಿ ಏರ್ಪಡಿಸಲಾಗಿದ್ದ, ಕಾರ್ಯಕ್ರಮಕ್ಕೆ ಬಂದಿದ್ದ, ಕೊಪ್ಪಳದ ಜೆಡಿಸ್ ಶಾಸಕ ಇಕ್ಬಾಲ್ ಅನ್ಸಾರಿಗೆ ಮಹಿಳೆಯರು ಘೇರಾವ್ ಹಾಕಿದ್ದಾರೆ. ಕಾರ್ಯಕ್ರದ ಹಿನ್ನೆಲೆ ವಾರ್ಡ್ಗೆ ಆಗಮಿಸಿದ್ದ ಅನ್ಸಾರಿ ಅವರು ಭಾಷಣ ಆರಂಭಿಸುತ್ತಿದ್ದಂತೆ ಮಹಿಳೆಯರು ಅನ್ಸಾರಿ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ವಾರ್ಡ್ನಲ್ಲಿ ಸರಿಯಾದ ಶೌಚಾಲಯಗಳ ನಿರ್ಮಾಣ ಮಾಡದ್ದರಿಂದ ಕೆರಳಿದ ಮಹಿಳೆಯರು, ತಂಬಿಗೆ ಹಿಡಿದುಕೊಂದು ಅನ್ಸಾರಿ ಭಾಷಣಕ್ಕೆ ಘೇರಾವ್ ಹಾಕಿದ್ದಾರೆ. ಇದರಿಂದ ಕೆಲ ಕಾಲ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ಶೌಚಾಲಯಗಳ ನಿರ್ಮಾಣ ಮಾಡದಿದ್ದಕ್ಕೆ ಅನ್ಸಾರಿ ವಿರುದ್ಧ ನೂರಾರು ಮಹಿಳೆಯರ ಅಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಸ್ಥಳಕ್ಕಾಗಮಿಸಿದ್ದ ಪೊಲೀಸರು ಮತ್ತು 28ನೇ ವಾರ್ಡ್ ಜನರ ಮಧ್ಯೆ ವಾಗ್ವಾದವೂ ನಡೆಯಿತು. ಇದರಿಂದ ಇಕ್ಬಾಲ್ ಅನ್ಸಾರಿ ಕಾರ್ಯಕ್ರಮದಿಂದ ಅರ್ಧಕ್ಕೇ ಹೋಗಬೇಕಾಯಿತು. ಅನ್ಸಾರಿ ಅವರು ಹಿಂದಿರುಗುವ ವೇಳೆ ರೊಚ್ಚಿಗೆದ್ದಿದ್ದ ಮಹಿಳೆಯರು, ತಂಬಿಗೆ ಮತ್ತು‌ ಚಪ್ಪಲಿ ಎಸೆದಿದ್ದಾರೆ ಎನ್ನಲಾಗಿದೆ. ಇದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಲಘು‌ ಲಾಠಿ ಪ್ರಹಾರ ನಡೆಸಿದ್ದಾರೆ. ಇನ್ನು ಪೊಲೀಸರು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Iqbal Ansari protest ಶೌಚಾಲಯ ಭಾಷಣ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ