ಪ್ರಿಯಕರನೊಂದಿಗೆ ಸೇರಿ ಪತಿ ಕೊಲೆಗೈದಿದ್ದ ಪತ್ನಿ ಮೇಲಿನ ಆರೋಪ ಸಾಬೀತು

Kannada News

26-04-2017

ಹಾಸನ : ಅನೈತಿಕ ಸಂಬಂಧ ಹಿನ್ನೆಲೆ ಪ್ರಿಯಕರನೊಂದಿಗೆ ಸೇರಿ ಪತಿ ಕೊಲೆಗೈದಿದ್ದ ಪತ್ನಿ ಮೇಲಿನ ಆರೋಪ ಸಾಬೀತಾಗಿದೆ. ಈ ಬಗ್ಗೆ ಹಾಸನದ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ತೀರ್ಪು ಪ್ರಕಟಿಸಿದೆ. ಹಾಸನ ಜಿಲ್ಲೆ ಬೇಲೂರು ತಾಲೂಕಿನ ದ್ಯಾವಪ್ಪನಹಳ್ಳಿಯಲ್ಲಿ 2012ರ ಫೆ.16ರಂದು ನಡೆದಿದ್ದ ಘಟನೆ ಸಂಬಂಧ  ರಾಧಾ, ಪ್ರಿಯಕರ ಹರೀಶ್ ಮತ್ತು ಲೋಕೇಶ್ ಮೇಲೆ ಕೊಲೆ ಆರೋಪ ಹಳೇಬೀಡು ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ರಾಧಾಳ ಗಂಡ ಕುಮಾರ್ ನನ್ನು ಕೊಲೆಗೈದು ಹೊಲದಲ್ಲಿ ಜೆಸಿಬಿಯಲ್ಲಿ ಗುಂಡಿ ತೆಗೆದು ಶವ ಹೂತು ಹಾಕಿದ್ದರು. ಹಳೇಬೀಡು ಪೊಲೀಸ್ ಠಾಣೆಯಲ್ಲಿ ಗಂಡ ಕುಮಾರ್ ಕಾಣೆಯಾಗಿದ್ದಾನೆ ಎಂದು ರಾಧಾ ದೂರು ನೀಡಿದ್ದಳು. ಅನುಮಾನಗೊಂಡ ಪೊಲೀಸರು ರಾಧಾಳನ್ನು ವಿಚಾರಣೆಗೆ ಒಳಪಡಿಸಿದ್ದರು.  ಪೊಲೀಸರು ಕಿರುಕುಳ ನೀಡುತ್ತಿದ್ದಾರೆ ಎಂದು ರಾಧಾ ಬೇಲೂರಿನ ನ್ಯಾಯಾಧೀಶರೆದುರು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಳು.  ರಾಧಾ ಮತ್ತು ಪ್ರಿಯಕರ ಹರೀಶ್ ನಡುವಿನ ಮೊಬೈಲ್ ಸಂಭಾಷಣೆಯಿಂದ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.  ಸಾಂದರ್ಭಿಕ ಸಾಕ್ಷಿ ಹಿನ್ನೆಲೆ ಮೂವರ ಮೇಲಿನ ಆರೋಪ ಸಾಬೀತಾಗಿದೆ. ನಾಳೆ ಮೂವರ ಶಿಕ್ಷೆ ಪ್ರಮಾಣವನ್ನು ನ್ಯಾಯಾಧೀಶ ಪ್ರಕಾಶ್ ಘೋಷಿಸಲಿದ್ದಾರೆ.

Links :
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ