ಟೆಂಪೋ ಡಿಕ್ಕಿ ಮೂವರ ದುರ್ಮರಣ

Accident: 3 bike riders died

05-02-2018

ಕಲಬುರಗಿ: ಟೆಂಪೋ ಮತ್ತು ಬೈಕ್ಗಳ ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಲಬುರಗಿ ತಾಲ್ಲೂಕಿನ ನಾವದಗಿ ಗ್ರಾಮದ ಬಳಿ ಈ ದುರ್ಘಟನೆ ನಡೆದಿದೆ. ಕಳೆದ ರಾತ್ರಿ ಈ ಅಫಘಾತ ಸಂಭವಿಸಿದ್ದು, ಬೈಕ್ ಸವಾರ ಶರಣು (25), ಈರಪ್ಪಾ(26), ರವಿಕುಮಾರ್ ಕುಲಕರ್ಣಿ(28) ಮೃತ ದುರ್ದೈವಿಗಳು. ಮೃತರು ಚಿಂಚೋಳಿ ತಾಲ್ಲೂಕಿನ ಬುಯ್ಯಾರ್ ಗ್ರಾಮದವರು ಎಂದು ತಿಳಿದು ಬಂದಿದೆ. ಕಳೆದ ರಾತ್ರಿ ಕಲಬುರಗಿ ನಗರದಿಂದ ಬುಯ್ಯಾರ್ ಗ್ರಾಮಕ್ಕೆ ತೆರಳುತ್ತಿದ್ದಾಗ, ವೇಗವಾಗಿ ಬಂದ ಟೊಂಪೋ ಮೂವರು ಬೈಕ್ ಸವಾರರಿಗೆ ಗುದ್ದಿದ್ದು, ಡಿಕ್ಕಿಯ ರಭಸಕ್ಕೆ ಮೂವರು ತೀವ್ರ ರಕ್ತ ಸ್ರಾವದಿಂದ ಮೃತಪಟ್ಟಿದ್ದಾರೆ. ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Accident Highway ದುರ್ದೈವಿ ಟೆಂಪೋ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ