ಇಂದಿನಿಂದ ವಿಧಾನಮಂಡಲ ಅಧಿವೇಶನ

karnataka Legislative Assembly session from today

05-02-2018

ಬೆಂಗಳೂರು: ಇಂದಿನಿಂದ ವಿಧಾನಮಂಡಲ ಅಧಿವೇಶನ ಆರಂಭವಾಗಲಿದ್ದು, ಇಂದು ವಿಧಾನಮಂಡಲ ಜಂಟಿ ಅಧಿವೇಶನವನ್ನುದ್ದೇಶಿಸಿ, ರಾಜ್ಯಪಾಲರಾದ ವಜುಭಾಯಿ ವಾಲ ಅವರು  ಭಾಷಣ ಮಾಡಲಿದ್ದಾರೆ. ಸರ್ಕಾರದ ಸಾಧನೆ-ವೈಫಲ್ಯಗಳ ಬಗ್ಗೆ ರಾಜ್ಯಪಾಲರು ಒಟ್ಟಾರೆಯಾಗಿ ತಮ್ಮ ಭಾಷಣದಲ್ಲಿ ಉಲ್ಲೇಖಿಸಲಿದ್ದು, ಬಳಿಕ ಅಗಲಿದ ಗಣ್ಯರಿಗೆ ಜಂಟಿ ಸದನದಲ್ಲಿ ಸಂತಾಪ ಸೂಚಿಸಲಿದ್ದಾರೆ.

ಇನ್ನು ನಾಳೆಯಿಂದ ಆರಂಭಗೊಂಡು ಫೆಬ್ರವರಿ 9ರವರೆಗೆ ಅಧಿವೇಶನ ನಡೆಯಲಿದೆ. ವಿಪಕ್ಷಗಳು ಸರ್ಕಾರವನ್ನು ಕಟ್ಟಿಹಾಕಲು ಕಾರ್ಯತಂತ್ರ ನಡೆಸಿದ್ದು, ವಿಪಕ್ಷಗಳ ದಾಳ ಎದುರಿಸಲು ಸರ್ಕಾರ ಸಜ್ಜಾಗಿದೆ. ಇದೇ ತಿಂಗಳ ಫೆಬ್ರವರಿ 16ರಂದು ಸಿಎಂ ಸಿದ್ದರಾಮಯ್ಯ ಅವರು ರಾಜ್ಯ ಸರಕಾರದ ಆಯವ್ಯಯ ಮಂಡನೆ ಮಾಡಲಿದ್ದಾರೆ. ಅಲ್ಲದೇ ಬಜೆಟ್ ಮೇಲಿನ ಚರ್ಚೆಯನ್ನು ಫೆಬ್ರವರಿ 17ರಿಂದ 28ರವರೆಗೆ ಉಭಯ ಸದನಗಳಲ್ಲಿ ನಡೆಯಲಿದೆ.


ಸಂಬಂಧಿತ ಟ್ಯಾಗ್ಗಳು

Vajubhai Vala Governor ಬಜೆಟ್ ಅಧಿವೇಶನ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ