ಬಾರ್ ನಲ್ಲಿ ಯವಕನ ಬರ್ಬರ ಕೊಲೆ

Horrific Murder in bar bengaluru

03-02-2018

ಬೆಂಗಳೂರು: ಬಾರ್ ನಲ್ಲಿ ಗುರಾಯಿಸಿದ್ದಕ್ಕೆ ಯುವಕನೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ. ಅರುಣ್(22) ಕೊಲೆಯಾದ ದುರ್ದೈವಿ. ಈತ ನಗರದ ಮಲ್ಲತ್ತಹಳ್ಳಿಯ ನಿವಾಸಿ ಎಂದು ತಿಳಿದು ಬಂದಿದೆ. ಕಳೆದ ರಾತ್ರಿ ಮುದ್ದಿನಪಾಳ್ಯದ ಮಾರುತಿ ಬಾರ್ಗೆ ಅರುಣ್, ಆತನ ಸ್ನೇಹಿತರೊಂದಿಗೆ ಮದ್ಯ ಖರೀದಿಸಲು ಬಂದಿದ್ದರು. ಈ ವೇಳೆ ಬಾರ್ ನಲ್ಲಿದ್ದ ಮೂವರು ಯಾಕೋ ಗುರಾಯಿಸ್ತೀಯ ಎಂದು ಅರುಣ್ ಜೊತೆಗೆ ಕಿರಿಕ್ ಶುರು ಮಾಡಿದ್ದು, ಜಗಳ ಆರಂಭವಾಗುತ್ತಿದ್ದಂತೆ, ಅರುಣ್ಗೆ ಮೂವರು ಚಾಕುವಿನಿಂದ ಇರಿದಿದ್ದಾರೆ. ಅಲ್ಲದೇ ಕಿಶನ್ ಎಂಬಾತನ ಮೇಲೂ ಹಲ್ಲೆ ಮಾಡಿದ್ದಾರೆ. ಅರಣ್ ಎದೆ ಭಾಗಕ್ಕೆ ಇರಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಕಿಶನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈತನ ಸ್ಥಿತಿಯೂ ಚಿಂತಾಜನಕವಾಗಿದೆ. ಘಟನೆ ಸಂಬಂಧ ಜ್ಞಾನ ಭಾರತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಸಂಬಂಧಿತ ಟ್ಯಾಗ್ಗಳು

murder bengaluru ಚಿಂತಾಜನಕ ಚಿಕಿತ್ಸೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ