ಬೆಲೆ ಕುಸಿತ: ರೈತರ ವಿಭಿನ್ನ ಪ್ರತಿಭಟನೆ

Price Crash: farmers Protest on road

03-02-2018

ಬೆಳಗಾವಿ: ಮಾರುಕಟ್ಟೆಯಲ್ಲಿ ಟೊಮ್ಯಾಟೊ ಬೆಲೆ ದಿಢೀರ್ ಕುಸಿತ ಹಿನ್ನೆಲೆ, ಕಂಗೆಟ್ಟ ರೈತರು ರೊಚ್ಚಿಗೆದ್ದು ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಬೆಳಗಾವಿ‌ ಜಿಲ್ಲಾಧಿಕಾರಿ‌ ಕಚೇರಿ ಮುಂಭಾಗ ಜಮಾಯಿಸಿರುವ ರೈತರು, ಟೊಮಾಟೋ ಹಣ್ಣು ಟ್ಯಾಕ್ಟರ್ ನಲ್ಲಿ ತುಂಬಿಕೊಂಡು ಬಂದು ಉಚಿತವಾಗಿ ವಿತರಣೆ ಮಾಡುವ ಮೂಲಕ ಪ್ರತಿಭಟಿಸಿದ್ದಾರೆ. ಆದರೆ ಅದು ಪ್ರತಿಭಟನೆಯೇ ಅಲ್ಲವೆಂಬಂತೆ, ಉಚಿತ ಟೊಮ್ಯಾಟೊ ಹಣ್ಣು ಪಡೆಯಲು‌ ಜನರು ಮುಗಿಬಿದ್ದಿದ್ದಾರೆ. ಸರದಿ ಸಾಲಿನಲ್ಲಿ ನಿಂತು ಬ್ಯಾಗ್ ಗಳಲ್ಲಿ ಹಣ್ಣನ್ನು ತುಂಬಿಕೊಂಡು ಹೋಗುತ್ತಿದ್ದರು. ಸುಮಾರು ನಾಲ್ಕು ಎಕರೆ ಜಮೀನಿನಲ್ಲಿ ಟೊಮ್ಯಾಟೊ ಬೆಳೆದಿರುವ ರೈತ ಬೆಲೆ ಕುಸಿತದಿಂದ ಕಂಗಾಲಾಗಿದ್ದಾರೆ. ಇಂದಿನ ಹೋಲ್ ಸೇಲ್ ಮಾರುಕಟ್ಟೆಯಲ್ಲಿ 1ರೂ.ಗೆ ಕೆಜಿಯಂತೆ ಮಾರಾಟವಾಗುತ್ತಿರುವುದಕ್ಕೆ ಬೇಸರ ಬೇಸರ ವ್ಯಕ್ತಪಡಿಸಿದ್ದು, ಈ ರೀತಿಯ ಪ್ರತಿಭಟನೆಗೆ ಮುಂದಾಗಿದ್ದಾರೆ. ರೈತರ ಹೋರಾಟಕ್ಕೆ ಭಾರತೀಯ ಕೃಷಿಕ ಸಮಾಜ ಕಾರ್ಯಕರ್ತರು ಸಾಥ್ ನೀಡಿದರು.


ಸಂಬಂಧಿತ ಟ್ಯಾಗ್ಗಳು

farmer protest tomato ಬೆಲೆ ಕುಸಿತ ಟೊಮ್ಯಾಟೊ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ