ಮಹದಾಯಿ:‘ಮೋದಿ ಮಧ್ಯಪ್ರವೇಶ ಇಲ್ಲ’

Modi does not intervene Mahadayi issue says eshwarappa

03-02-2018

ಶಿವಮೊಗ್ಗ: ನನಗೆ ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚು ಇರುವ ಕಾರಣ ಶ್ರೀಗಂಧ ಸಂಸ್ಥೆಯಿಂದ ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿದೆ, ಧಾರ್ಮಿಕ ಕಾರ್ಯಕ್ರಮವನ್ನು ಚುನಾವಣೆಗೆ ಹೋಲಿಸುವುದು ಸರಿಯಲ್ಲ, ಚುನಾವಣೆ ಬಂದ ಕಾರಣಕ್ಕೆ ನಾವು ಧಾರ್ಮಿಕ ಕಾರ್ಯಕ್ರಮ ನಡೆಸುತ್ತಿಲ್ಲ ಎಂದು, ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ಶಿವಮೊಗ್ಗದಲ್ಲಿಂದು ಮಾತನಾಡಿದ ಅವರು, ನಾಳೆ ಬೆಂಗಳೂರಿನಲ್ಲಿ ನಡೆಯಲಿರುವ ಪರಿವರ್ತನ ರ‍್ಯಾಲಿಗೆ 4 ಲಕ್ಷ ಜನ ಸೇರುವ ನೀರಿಕ್ಷೆ ಇದೆ, ಶಿವಮೊಗ್ಗದಿಂದ 25 ಸಾವಿರ ಜನ ಹೊರಡಲಿದ್ದಾರೆ ಎಂದು ತಿಳಿಸಿದ್ದಾರೆ. ಇನ್ನು ಮಹದಾಯಿ ವಿಚಾರದಲ್ಲಿ ಮೋದಿ ಮಧ್ಯ ಪ್ರವೇಶ ಮಾಡಲು ಬರೋದಿಲ್ಲ, ಪ್ರಕರಣ ನ್ಯಾಯಾಧಿಕರಣದಲ್ಲಿದೆ ಎಂದುರು.

ಇನ್ನು ನದಿ ವಿವಾದ ಮೂರೂ ರಾಜ್ಯದವರು ಕುಳಿತು ಮಾತುಕತೆ ಮೂಲಕ ಬಗೆಹರಿಸಿ ಕೊಳ್ಳಬೇಕಿದೆ. ಕಾಂಗ್ರೆಸ್ ನವರಿಗೆ ಮಹದಾಯಿ ಸಮಸ್ಯೆ ಬಗೆ ಹರಿಯುವುದು ಬೇಡವಾಗಿದೆ. ಸಿದ್ದರಾಮಯ್ಯನವರನ್ನು ಕರ್ನಾಟಕದ ಸಿಎಂ ಎಂದು ಹೇಳಲು ಅಸಹ್ಯವಾಗುತ್ತದೆ ಎಂದು ಕಟುವಾಗಿ ಟೀಕಿಸಿದ್ದಾರೆ. ಸಿದ್ದರಾಮಯ್ಯನವರ ರೀತಿ ಯಾವ ಸಿಎಂ ನಡೆದು ಕೊಂಡಿರಲಿಲ್ಲ. ಅದಲ್ಲದೇ ಸಂತೋಷ್ ವಿಚಾರಲ್ಲಿ ಗೃಹ ಸಚಿವ ರಾಮಲಿಂಗಾ ರೆಡ್ಡಿ ಹೇಳಿಕೆ ನೀಡಿದ್ದು ಸರಿಯಲ್ಲ ಎಂದಿದ್ದಾರೆ.


ಸಂಬಂಧಿತ ಟ್ಯಾಗ್ಗಳು

K.S eshwarappa siddaramaiah ಮಹದಾಯಿ ನ್ಯಾಯಾಧಿಕರಣ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ