'ಸಿದ್ದರಾಮಯ್ಯ ಮನೆಗೆ ಹೋಗುವುದು ನಿಶ್ಚಿತ’03-02-2018

ಆರೋಗ್ಯ ಸಚಿವ ರಮೇಶ್ ಕುಮಾರ್ ಕೂಡ ನರೇಂದ್ರ ಮೋದಿ ಅವರಂತೆ ಮಾತಿನ ಮಲ್ಲ. ಆರೋಗ್ಯದ ಬಹಳಷ್ಟು ಯೋಜನೆಗಳು ಸರಿಯಾಗಿ ಅನುಷ್ಠಾನ ಮಾಡಲಿಲ್ಲ ಎಂದು, ಮಾಜಿ ಸಂಸದ ವಿಶ್ವನಾಥ್ ಆರೋಪಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮನೆಗೆ ಹೋಗುವುದು ನಿಶ್ಚಿತ. ನಾಲ್ಕು ಮುಕ್ಕಾಲು ವರ್ಷ ಮೌನವಾಗಿದ್ದು, ಈಗ ಮನೆಗೆ ಹೋಗುವಾಗ ಹಲವು ಯೋಜನೆ ಅನುಷ್ಠಾನ ಮಾಡುತ್ತೇನೆ ಅಂತಾರೆ, ನನ್ನ ನಂತರ ಜಲ ಪ್ರಳಯ ಆಗಲಿ ಎಂದು 14ನೇ ಲೂಯಿ ಹೇಳಿದ್ದ. ಅದರಂತೆ ನನ್ನ ನಂತರ ಆರ್ಥಿಕ ದಿವಾಳಿ ಆಗಲಿ ಅಂತ ಬಜೆಟ್ ಮಂಡನೆ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ. 12 ಗಂಟೆಯಲ್ಲಿ ಮುಸ್ಲಿಂ ಧರ್ಮದ ಮುಖಂಡರನ್ನು ಭೇಟಿ ಮಾಡಿದ್ದಾರೆ, ಹಗಲು ವೇಳೆ ಭೇಟಿ ಮಾಡಲು ಇವರಿಗೆ ಹೆದರಿಕೆಯೇ ಎಂದು ಪ್ರಶ್ನಿಸಿದ್ದು, ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ.


ಸಂಬಂಧಿತ ಟ್ಯಾಗ್ಗಳು

H.Vishwanat siddaramaiah ಆರೋಗ್ಯ ಅನುಷ್ಠಾನ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ