ಕಾಂಗ್ರೆಸ್ ಗೆ ಮುರಳೀಧರ್ ರಾವ್ ಚಾಲೆಂಜ್

Muralidhar Rao

03-02-2018

ಬೆಂಗಳೂರು: ಈಗಾಗಲೇ ತೀವ್ರ ವಿವಾದ ಸೃಷ್ಟಿಸಿರುವ ಓವೈಸಿ ಜೊತೆ ಬಿಜೆಪಿ ಒಪ್ಪಂದ ವಿಚಾರ‌ಕ್ಕೆ ಸಂಬಂಧಿಸಿದಂತೆ, ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರ್ ರಾವ್ ಅವರು ಪ್ರತಿಕ್ರಿಯಿಸಿದ್ದು, ಗೃಹ ಸಚಿವ ರಾಮಲಿಂಗಾರೆಡ್ಡಿ, ಸಿಎಂ ಸಿದ್ದರಾಮಯ್ಯ ಅವರೇ ನಿಮ್ಮ ಇನ್ನೊಂದು ಮುಖವನ್ನು ಮುಚ್ಚಿಕೊಳ್ಳೋದು ಬೇಡ. ನಾವು ಎಲ್ಲಿ ಬೇಕಾದ್ರೂ ಚರ್ಚೆಗೆ ಬರುತ್ತೇವೆ, ನಮ್ಮ ಸವಾಲು ಸ್ವೀಕಾರ ಮಾಡಿ ಎಂದು ಹೇಳಿದ್ದಾರೆ. ನಾವು ಓವೈಸಿ ಪಕ್ಷದ ಜತೆ ಒಪ್ಪಂದ ಮಾಡಿಕೊಂಡಿಲ್ಲ, ಆಂಧ್ರಪ್ರದೇಶದ ಕಾಂಗ್ರೆಸ್ ಇತಿಹಾಸ ನೋಡಿದರೆ ಗೊತ್ತಾಗುತ್ತದೆ ಓವೈಸಿ ಪಕ್ಷದ ಜತೆ ಯಾರು ಒಪ್ಪಂದ ಮಾಡಿಕೊಂಡಿರೋದು ಅಂತಾ..? ಬನ್ನಿ ಈ ಕುರಿತು ಚರ್ಚೆ ಮಾಡೋಣ ಎಂದು ಓಪನ್ ಚಾಲೆಂಜ್ ಹಾಕಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Muralidhar Rao open challenge ಓವೈಸಿ ಆಂಧ್ರಪ್ರದೇಶ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ