ಜಿಲ್ಲಾಸ್ಪತ್ರೆಯಲ್ಲಿ ಕಳ್ಳನಿಗೆ ಸಖತ್ ಗೂಸ

A thief caught in bidar district hospital

03-02-2018

ಬೀದರ್: ಜಿಲ್ಲಾಸ್ಪತ್ರೆಯಲ್ಲಿ ಹಲವು ಬಾರಿ ಕಳ್ಳತನ ಮಾಡಿದ್ದ ಕಳ್ಳನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಯು ಬೀದರ್ ನಲ್ಲಿ ನಡೆದಿದೆ. ಬೀದರ್ನ ಜಿಲ್ಲಾಸ್ಪತ್ರೆಯಲ್ಲಿ ಕಳವು ಮಾಡುತ್ತಿದ್ದ ಕಳ್ಳನನ್ನು ಹಿಡಿದ ಸಾರ್ವಜನಿಕರು ಆಸ್ಪತ್ರೆಯಲ್ಲೇ ಥಳಿಸಿದ್ದಾರೆ. ಕಳೆದ ಕೆಲದಿನಗಳಿಂದ ಕಳ್ಳತನ ಎಸಗುತ್ತಿದ್ದ ಈತ, ಇತ್ತೀಚೆಗೆ ಎಸಿ ಕದ್ದು ಪರಾರಿಯಾಗಿದ್ದ. ಇನ್ನು ಇಂದೂ ಕೂಡ ಕಳ್ಳತನ ಮಾಡಲು ಆಸ್ಪತ್ರೆಗೆ ಧಾವಿಸಿದ್ದಾನೆ. ಆದರೆ ಇಂದು ಆಸ್ಪತ್ರೆಯಲ್ಲಿ ತನ್ನ ಕೈಚಳಕ ತೋರಿಸುವ ವೇಳೆ ಸಾರ್ವಜನಿಕರಿಗೆ ಸಿಕ್ಕಿಬಿದ್ದಿದ್ದಾನೆ. ಕಳ್ಳನಿಗೆ ಸಖತ್ ಆಗಿ ಗೂಸ ನೀಡಿದ ಸಾರ್ವಜನಿಕರು, ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದ ನ್ಯೂ ಟೌನ್ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ