ನಕಲಿ ಜ್ಯೋತಿಷಿ ಬಂಧನ

Fake astrologer arrested by police

03-02-2018

ಬೆಂಗಳೂರು: ನಕಲಿ ಜ್ಯೋತಿಷಿಯೊಬ್ಬನನ್ನು ಬೆಂಗಳೂರಿನ ವಿದ್ಯಾರಣ್ಯಪುರ ಪೊಲೀಸರು ಬಂಧಿಸಿದ್ದಾರೆ. ಸಾಯಿ ರಾಮ್ ಬಂಧಿತ ನಕಲಿ ಜ್ಯೋತಿಷಿ. ವಿದ್ಯಾರಣ್ಯಪುರದ ದುರ್ಗಾ ದೇವಸ್ಥಾನದಲ್ಲಿ ಜ್ಯೋತಿಷ್ಯ ಹೇಳುತ್ತಿದ್ದ ಈತ, ಸ್ವಾತಿ ಎಂಬ ಮಹಿಳೆಗೆ ಜ್ಯೋತಿಷ್ಯ ಹೇಳುತ್ತೇನೆ ಎಂದು ಕರೆದಿದ್ದು, ನಂತರ ಅವರ ಕೈಗೆ ಕಪ್ಪು ಚುಕ್ಕಿ ಇಟ್ಟು ಹಿಪ್ನಾಟಿಸಂ ಮಾಡಿದ್ದ. ತದನಂತರ ತನ್ನ ನಿಜ ರೂಪ ಬಯಲು ಪಡಿಸಿದ ಜ್ಯೋತಿಷಿ, ಅವರಿಂದ 5ಸಾವಿರ ರೂಪಾಯಿ ಹಣ ಮತ್ತು 13ಗ್ರಾಂ. ಚಿನ್ನವನ್ನು ಕದ್ದು ಪರಾರಿಯಾಗಿದ್ದಾನೆ. ಇದಾದ ಒಂದೂವರೆ ವರ್ಷದ ನಂತರ ಮತ್ತೆ ಸ್ವಾತಿ ಅದೇ ದೇವಸ್ಥಾನಕ್ಕೆ ಹೋದಾಗ, ನಕಲಿ ಜ್ಯೋತಿಷಿ ಸಾಯಿ ರಾಮ್ ದೇವಸ್ಥಾನದಲ್ಲಿರುವುದು ಕಂಡುಬಂದಿದ್ದು, ಸ್ವಾತಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ದೂರನ್ನು ಆಧರಿಸಿ ವಿದ್ಯಾರಣ್ಯಪುರ ಪೊಲೀಸರು ಸಾಯಿರಾಮ್ ನನ್ನು ಬಂಧಿಸಿ, ವಿಚಾರಣೆಗೊಳಪಡಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Astrology hypnotism ಜ್ಯೋತಿಷಿ ದೇವಸ್ಥಾನ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ