ಬಂದ್ ಗೆ ಹೈಕೋರ್ಟ್ ತಡೆ

high court stay for bengaluru bandh

02-02-2018

ಬೆಂಗಳೂರು: ಫೆಬ್ರವರಿ 4ರ ಬಂದ್ ಗೆ ಹೈಕೋರ್ಟ್ ತಡೆ ನೀಡಿದೆ. ಮಹದಾಯಿ ವಿವಾದ ಹಿನ್ನೆಲೆ, ಕನ್ನಡಪರ ಸಂಘಟನೆಗಳ ಫೆಬ್ರವರಿ 4ರ ಬಂದ್ ಪ್ರಶ್ನಿಸಿ ಸಲ್ಲಿಸಿದ್ದ ಪಿಐಎಲ್ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ ಬಂದ್ ಗೆ ತಡೆ ನೀಡಿದೆ. ಸುಪ್ರೀಂ ಕೋರ್ಟ್ ಆದೇಶದ ಅನ್ವಯ ಬಂದ್ ಮಾಡುವ ಹಾಗಿಲ್ಲ, ಎಂದು ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ. ಬಂದ್ ಗೆ ಕರೆ ನೀಡಿರುವುದು ಸಂವಿಧಾನ ಬಾಹಿರ ಎಂದು ನ್ಯಾ.ಎಸ್. ದಿನೇಶ್ ಕುಮಾರ್ ಅವರಿದ್ದ ಪೀಠ ಆದೇಶ ನೀಡಿದೆ. ಅಲ್ಲದೇ ಬೇರೆಯವರಿಗೆ ತೊಂದರೆ ನೀಡುವುದು ಮೂಲಭೂತ ಹಕ್ಕಲ್ಲ ಎಂದು ಹೇಳಿದೆ.


ಸಂಬಂಧಿತ ಟ್ಯಾಗ್ಗಳು

high court bandh ಮೂಲಭೂತ ಸಂವಿಧಾನ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ