‘ಸಂತೋಷ್ ಕೊಲೆ ಖಂಡನೀಯ’-ಸಿಎಂ

CM condemned Santosh murder

02-02-2018

ಬೆಂಗಳೂರು: ಬಿಜೆಪಿಯವರು ಕೊಲೆ ಆದವರನ್ನೆಲ್ಲಾ ನಮ್ಮ ಪಕ್ಷದ ಕಾರ್ಯಕರ್ತರು ಎಂದು ಹೇಳಿಕೊಂಡು ರಾಜಕಾರಣ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಇತ್ತೀಚೆಗೆ ಜೆ.ಸಿ.ನಗರದಲ್ಲಿ ಕೊಲೆಯಾದ ಸಂತೋಷ್ ಎಂಬ ಯುವಕ ಬಿಜೆಪಿ ಕಾರ್ಯಕರ್ತನಲ್ಲ. ಇತ್ತೀಚೆಗೆ ಸತ್ತವರು, ಕೊಲೆಯಾದವರನ್ನೆಲ್ಲಾ ಬಿಜೆಪಿಯವರು ನಮ್ಮ ಪಕ್ಷದವರು ಎಂದು ಹೇಳಿಕೊಂಡು ರಾಜಕಾರಣ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅದೆಲ್ಲಾ ಏನೇ ಇದ್ದರೂ ಕೊಲೆ ಖಂಡನೀಯ. ಯಾರ ಜೀವಕ್ಕೂ ಅಪಾಯವಾಗಬಾರದು. ಇಂತಹ ಪ್ರಕರಣಗಳನ್ನು ನಾವು ಖಂಡಿಸುತ್ತೇವೆ. ಸಂತೋಷ್ ಕೊಲೆ ಪ್ರಕರಣವನ್ನು ಈಗಾಗಲೇ ಸಿಸಿಬಿಗೆ ವಹಿಸಲಾಗಿದೆ. ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಗಂಭೀರ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು. ಈ ಪ್ರಕರಣದಲ್ಲಿ ಗಾಂಜಾ ವಹಿವಾಟು ನಡೆದಿರುವುದು ಪತ್ತೆಯಾದರೆ ಅದರ ವಿರುದ್ಧವೂ ಕ್ರಮ ಜರುಗಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.


ಸಂಬಂಧಿತ ಟ್ಯಾಗ್ಗಳು

Siddaramaiah BJP ಆಕ್ರೋಶ ರಾಜಕಾರಣ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ