ಸಂತೋಷ್ ಕುಟುಂಬಕ್ಕೆ ಬಿಎಸ್ ವೈ ಸಾಂತ್ವಾನ

yeddyurappa visits santhosh home

02-02-2018

ಬೆಂಗಳೂರು: ಕೊಲೆಯಾದ ಬಿಜೆಪಿ ಕಾರ್ಯಕರ್ತ ಸಂತೋಷ್ ಅವರ ಜೆಸಿನಗರದ ಚಿನ್ನಪ್ಪಗಾರ್ಡನ್‍ ನ ನಿವಾಸಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಇಂದು ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವಾನ ಹೇಳಿದರು. ಕುಟುಂಬದವರಿಗೆ 1ಲಕ್ಷ ನೆರವು ನೀಡಿ ಸಾಂತ್ವಾನ ಹೇಳಿ ಹೊರಬಂದ ನಂತರ ಸುದ್ದಿಗಾರರ ಜೊತೆ ಮಾತನಾಡಿ ಹತ್ಯೆ ವಿಚಾರ ಸಂಬಂಧ, ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂತೋಷ್ ಹತ್ಯೆಗೈದ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಿ ಅವರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಅಮಾಯಕ ಹಿಂದೂ ಕಾರ್ಯಕರ್ತರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಸಾಯಿಸಬೇಕು ಅಂತ ಇರ್ಲಿಲ್ಲ, ಸುಮ್ನೆ ಚುಚ್ಚಿದ ಅಷ್ಟೇ" ಎಷ್ಟು ಹಗುರವಾಗಿ ಹೇಳಿಬಿಟ್ಟಿರಿ ರಾಮಲಿಂಗಾರೆಡ್ಡಿಯವರೇ? ಸುಮ್ನೆ ಚುಚ್ಚಿದರೂ ಹೋದದ್ದು ಪ್ರಾಣವೇ ಅಲ್ಲವೇ?ಅಷ್ಟು ಅಸಡ್ಡೆಯಾಯಿತೇ ಹಿಂದೂಗಳ ಪ್ರಾಣ? 'ಮುಗ್ಧ ಅಲ್ಪಸಂಖ್ಯಾತರ ಮೇಲಿನ ಪ್ರಕರಣವನ್ನು ಕೈಬಿಡಲು ನಿರ್ಧರಿಸಿದ್ದು ಇಂಥವರನ್ನು ಬೆಂಬಲಿಸುವುದಕ್ಕಾಗಿಯೇ ಎಂದು ಪ್ರಶ್ನಿಸಿದ್ದಾರೆ ಅಲ್ಲದೆ "ಬಿಜೆಪಿ ಕಾರ್ಯಕರ್ತ ಸಂತೋಷ್ ಹತ್ಯೆಗೈದ ವಸೀಮ್‍ನ ತಂದೆ ಖಾದರ್ ಷರೀಫ್, ಕಾಂಗ್ರೆಸ್ ಮುಖಂಡರೆಂದು ತಿಳಿದು ಬಂದಿದೆ. ಈ ಮೂಲಕ ಕಾಂಗ್ರೆಸ್‍ನ ಕ್ರೂರ ಮನಸ್ಥಿತಿ ಮತ್ತೊಮ್ಮೆ ಅನಾವರಣಗೊಂಡಿದೆ. ಇಂಥ ಗೂಂಡಾ ಸರ್ಕಾರದ ಕ್ರೌರ್ಯಕ್ಕೆ ಮಕ್ಕಳನ್ನು ಕಳೆದುಕೊಂಡ ತಂದೆ ತಾಯಂದಿರ ಕಣ್ಣೀರಿನ ಶಾಪ ತಟ್ಟದೇ ಇರದು ಎಂದು ಹೇಳಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ