ಸೌಹಾರ್ದಕೂಟ: ಬಿಜೆಪಿಗೆ ಯುಟಿ ಖಾದರ್ ತಿರುಗೇಟು

U.T.Khader raction on BJP alligation

02-02-2018

ಬೆಂಗಳೂರು: ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತ ಸಂತೋಷ್ ಅವರ ಮೃತದೇಹವನ್ನು ನಿನ್ನೆ ಜೆಸಿನಗರದ ಚಿನ್ನಪ್ಪಗಾರ್ಡನ್‍ನ ನಿವಾಸದ ಬಳಿಯಿಟ್ಟು ಪರಿಹಾರಕ್ಕೆ ಆಗ್ರಹಿಸಿ ಸ್ವಯಂ ಘೋಷಿತ ಬಂದ್ ನಡೆಸುತ್ತಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಥಳಕ್ಕೆ ಧಾವಿಸದೇ ಸಚಿವ ಯುಟಿ ಖಾದರ್ ಏರ್ಪಡಿಸಿದ್ದ ಔತಣಕೂಟದಲ್ಲಿ ಪಾಲ್ಗೊಂಡಿರುವುದು ಭಾರೀ ವಿವಾದಕ್ಕೆ ಕಾರಣವಾಗಿದೆ.

ಚಿನ್ನಪ್ಪಗಾರ್ಡನ್ ಮನೆಯ ಬಳಿ ಸಂತೋಷ್ ಮೃತದೇಹವನ್ನಿಟ್ಟುಕೊಂಡು ಬಿಜೆಪಿ ಮುಖಂಡರು ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದು, ಪ್ರದೇಶದಲ್ಲಿ ಅಘೋಷಿತ ಬಂದ್ ವಾತಾವರಣ ನಿರ್ಮಾಣಗೊಂಡಿದ್ದರೂ ಮುಖ್ಯಮಂತ್ರಿಗಳು ಮೃತರ ಅಂತಿಮ ದರ್ಶನ ಪಡೆದು ಕುಟುಂಬದವರಿಗೆ ಸಾಂತ್ವಾನ ಹೇಳಲು ಹೋಗದೆ ಮುಸ್ಲಿಂ ಮುಖಂಡರ ಜೊತೆ ಔತಣಕೂಟದಲ್ಲಿ ಭಾಗಿಯಾಗಿದ್ದರು.

ಮುಖ್ಯಮಂತ್ರಿಗಳು ಔತಣಕೂಟದಲ್ಲಿ ಪಾಲ್ಗೊಂಡಿರುವುದು ಮಾದ್ಯಮಗಳಲ್ಲಿ ಪ್ರಸಾರಗೊಂಡಿದ್ದು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಜಿಜೆಪಿ ಮುಖಂಡರುಗಳು ಖಾದರ್ ಮನೆಗೆ ಬರುವ ಬದಲು ಮುಖ್ಯಂತ್ರಿಗಳು ಸಂತೋಷ್ ಮನೆಗೆ ಆಗಮಿಸಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಬೇಕಿತ್ತು. ಆದರೆ ಸಿಎಂ ಸಂತೋಷ್ ಹತ್ಯೆ ಬಳಿಕ ಉಂಟಾಗಿದ್ದ ಗಲಭೆಯಲ್ಲಿ ಪಾಲ್ಗೊಂಡಿದ್ದವರೊಂದಿಗೇ ಕುಳಿತು ಭೋಜನ ಸವೆದಿದ್ದಾರೆ ಎಂದು ಆರೋಪಿಸಿದ್ದಾರೆ

ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಸಚಿವ ಯುಟಿ ಖಾದರ್ ಊಟ, ಸೌಹಾರ್ದಕೂಟಕ್ಕೂ ಬಿಜೆಪಿ ನಾಯಕರ ಅನುಮತಿ ಪಡೆಯಬೇಕಾ ಎಂದು ತಿರುಗೇಟು ನೀಡಿದ್ದಾರೆ. ಬಿಜೆಪಿ ಕಾರ್ಯಕರ್ತ ಸಂತೋಷ್ ಹತ್ಯೆ ಹಿನ್ನಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಬಿಜೆಪಿ ಟಾರ್ಗೆಟ್ ಮಾಡಿಕೊಂಡಿದ್ದು, ಪ್ರತಿಯೊಂದಕ್ಕೂ ಅವರನ್ನು ದೂಷಿಸುವುದು ಸರಿಯಲ್ಲ ಎಂದು ಖಾದರ್ ಹೇಳಿದ್ದಾರೆ. ಸುಮಾರು ನಾಲ್ಕು ವರ್ಷಗಳ ಬಳಿಕ ಸಿಎಂ ತಮ್ಮ ನಿವಾಸಕ್ಕೆ ಆಗಮಿಸಿದ್ದಾರೆ. ಹೀಗಾಗಿ ಅವರಿಗಾಗಿ ಔತಣಕೂಟ ಏರ್ಪಡಿಸಿದ್ದೆನೇ ಹೊರತು ಇನ್ನಾವುದೇ ವಿಚಾರಕ್ಕೂ ಅಲ್ಲ.ಸುಖಾ ಸುಮ್ಮನೆ ಸಿಎಂ ವಿರುದ್ಧ ಆರೋಪ ಸರಿಯಲ್ಲ. ನಮ್ಮ ಮನೆಯ ಊಟ,ಸೌಹಾರ್ದ ಕೂಟಕ್ಕೂ ನಾವು ಬಿಜೆಪಿಯವರ ಅನುಮತಿ ಪಡೆಯಬೇಕೇ..? ಕಾಂಗ್ರೆಸ್ ಸರ್ಕಾರದ ವಿರುದ್ಧ ಆರೋಪ  ಮಾಡಲು ಅವರ ಬಳಿ ಏನೂ ಇಲ್ಲ. ಈ ಕಾರಣಕ್ಕಾಗಿ ಅವರು ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ಬಿಜೆಪಿ ನಾಯಕರಿಗೆ ನೈತಿಕತೆಯೇ ಇಲ್ಲ. ಕಳೆದ ನಾಲ್ಕು ತಿಂಗಳಿನಿಂದ ಯಾವ ಯಾವ ಹತ್ಯೆಯಾಗಿದೆ ಎಂಬುದನ್ನು ಲೆಕ್ಕ ಹಾಕಿಕೊಂಡು ರಾಜಕೀಯ ಮಾಡುತ್ತಿದ್ದಾರೆ. ನಿನ್ನೆಯ ಔತಣಕೂಟದ ಆರೋಪಗಳಿಗೆ ಮಹತ್ವ ಕೊಡುವ ಅಗತ್ಯ ಇಲ್ಲ ಎಂದು ಯುಟಿ ಖಾದರ್ ಬಿಜೆಪಿ ಮುಖಂಡರಿಗೆ ತಿರುಗೇಟು ನೀಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

U.T.Khader Siddaramaiah ನಾಯಕ ನಿವಾಸ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ