3-4 ವರ್ಷಗಳಿಂದ ಯವತಿ ಮೇಲೆ ಅತ್ಯಾಚಾರ..!

one more love sex dhok case in bengaluru

02-02-2018

ಬೆಂಗಳೂರು: ಮಾದನಾಯ್ಕನಹಳ್ಳಿಯ ಹೆಗ್ಗಡದೇವನಪುರದಲ್ಲಿ ಬೆತ್ತಲೆ ವಿಡಿಯೋ ಮಾಡಿ ಯುವತಿಯ ಮೇಲೆ ನಿರಂತರ ಅತ್ಯಾಚಾರ ನಡೆಸಿರುವ ಹೀನ ಕೃತ್ಯ ನಡೆದಿದ್ದು ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಪ್ರೀತಿಸುವ ನಾಟಕವಾಡಿ ಮದುವೆಯಾಗುವುದಾಗಿ ನಂಬಿಸಿ ಬೆತ್ತಲೆ ವಿಡಿಯೋ ಮಾಡಿ 3-4 ವರ್ಷಗಳಿಂದ ಯುವತಿಯ ಮೇಲೆ ಅತ್ಯಾಚಾರ ಎಸಗಿರುವ ವಿಜಯ್‍ ಕುಮಾರ್ಗಾಗಿ ಮಾದನಾಯಕನಹಳ್ಳಿ ಪೊಲೀಸರು ಶೋಧ ನಡೆಸಿದ್ದಾರೆ.

ಈ ನಡುವೆ ಅತ್ಯಾಚಾರದ ಬಗ್ಗೆ ದೂರು ನೀಡಿದ್ದರೂ ಪೊಲೀಸರು ಯಾವುದೇ ಸಾಕ್ಷಿ ಇಲ್ಲ ಎಂದು ಹೇಳಿ ಸರಿಯಾದ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಸಂತ್ರಸ್ಥ ಯುವತಿ ಆರೋಪಿಸಿದ್ದಾರೆ. ಮಾಗಡಿ ತಾಲ್ಲೂಕಿನ ಕಣನೂರುವಿನ ವಿಜಯ್‍ಕುಮಾರ್ ಈಗಾಗಲೇ ಒಂದು ಮದುವೆಯಾಗಿದ್ದು, ಆದರೂ ನಾನು ಕಣನೂರಿನಲ್ಲಿನ ತನ್ನ ಅಜ್ಜಿ ಮನೆಗೆ ಹೋದಾಗ ಪ್ರೀತಿಸಿ ವಿವಾಹವಾಗುವ ನಾಟಕ ಮಾಡಿ ನಿನ್ನನ್ನು ನಾನು ಲವ್ ಮಾಡುತ್ತಿದ್ದೇನೆ ಎಂದು ನಂಬಿಸಿ ಬೆತ್ತಲೆ ವಿಡಿಯೋ ಮಾಡಿ ಅದನ್ನು ತೋರಿಸಿ ಬೆದರಿಸಿ ಹಲವು ಬಾರಿ ಅತ್ಯಾಚಾರ ಮಾಡಿದ್ದಾನೆ. ಇದರಿಂದ ನಾನು ಎರಡು ಬಾರಿ ಗರ್ಭಿಣಿಯಾಗಿದ್ದೆ. ಈ ವಿಷಯ ತಿಳಿದು ಆತನೇ ಮಾತ್ರೆಗಳನ್ನು ನೀಡಿ ಅಬಾರ್ಷನ್ ಮಾಡಿಸಿದ್ದಾನೆ ಎಂದು ಯುವತಿ ಹೇಳಿದ್ದಾರೆ.

ಈ ಬಗ್ಗೆ ಮನೆಯವರಿಗೆ ವಿಷಯ ತಿಳಿಸಿದೆ, ಬಳಿಕ ಗಾಬರಿಗೊಂಡ ಪೋಷಕರು, ವಿಜಯ್ ಕೈಕಾಲು ಹಿಡಿದು ಮದುವೆಯಾಗುವಂತೆ ಕಣ್ಣೀರಿಟ್ಟಿದ್ದಾರೆ. ಆದರೆ ವಿಜಯ್‍ ಕುಮಾರ್ ನನ್ನ ಪ್ರೀತಿಯನ್ನು ತಿರಸ್ಕರಿಸಿ ನನಗೂ-ಈಕೆಗೂ ಯಾವುದೇ ಸಂಬಂಧವಿಲ್ಲ, ಪರಿಚಯವೂ ಇಲ್ಲ ಎಂದು ಹೇಳಿ ನಾಪತ್ತೆಯಾಗಿದ್ದಾನೆ ಎಂದು ಸಂತ್ರಸ್ತ ಯುವತಿ ಹೇಳಿದ್ದಾರೆ. ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಾಗಿ ಹುಡುಕಾಡುತ್ತಿದ್ದಾರೆ. ಆದರೆ ಪೊಲೀಸರು ಆರೋಪಿ ವಿಜಯ್‍ಕುಮಾರ್ಗೆ ರಕ್ಷಣೆ ನೀಡುತ್ತಿದ್ದಾರೆ ಎಂದು ನೊಂದ ಯುವತಿ ಹಾಗೂ ಪೋಷಕರು ಆರೋಪಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Rape dhoka ಗರ್ಭಿಣಿ ಅಬಾರ್ಷನ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ