ಮಾಜಿ ಶಾಸಕನ ಫ್ಲೆಕ್ಸ್ ಗಳು ಧ್ವಂಸ..!

Ex JDS mla flexes damaged in mandya

02-02-2018

ಮಂಡ್ಯ: ಮಂಡ್ಯದ ಮಾಜಿ ಶಾಸಕನ ಹುಟ್ಟು ಹಬ್ಬಕ್ಕೆ ಹಾಕಲಾಗಿದ್ದ ಫ್ಲೆಕ್ಸ್ ಗಳನ್ನು ಕಿಡಿಗೇಡಿಗಳು ಧ್ವಂಸಗೊಳಿಸಿರುವ ಘಟನೆ, ಮಂಡ್ಯದಲ್ಲಿ ನಡೆದಿದೆ. ಮಂಡ್ಯದ ಮಾಜಿ ಜೆಡಿಎಸ್ ಶಾಸಕ ಎಂ.ಶ್ರೀನಿವಾಸ್ ಹುಟ್ಟು ಹಬ್ಬಕ್ಕಾಗಿ ಬೆಂಬಲಿಗರು, ಅಭಿಮಾನಿಗಳು ಮಂಡ್ಯದ ನಗರದ ಸುತ್ತಮುತ್ತ ಹಲವು ಫ್ಲೆಕ್ಸ್ ಗಳನ್ನು ಕಾಕಿದ್ದರು. ಆದರೆ ಕಿಡಿಗೇಡಿಗಳು ರಾತ್ರೋರಾತ್ರಿ  ಫ್ಲೆಕ್ಸ್ ಗಳನ್ನು ಹರಿದು ಹಾಕಿ ಧ್ವಂಸಗೊಳಿಸಿ ವಿಕೃತಿ ಮೆರೆದಿದ್ದಾರೆ. ಕಿಡಿಗೇಡಿಗಳ ಈ ದುಷ್ಕೃತ್ಯದಿಂದ ಎಂ.ಶ್ರೀನಿವಾಸ್ ಅಭಿಮಾನಿಗಳ ಮತ್ತು ಜೆಡಿಎಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಮತ್ತು ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸರನ್ನು ಆಗ್ರಹಿಸಿದ್ದಾರೆ.

 


ಸಂಬಂಧಿತ ಟ್ಯಾಗ್ಗಳು

Mandya JDS M.srinivas JDS ಫ್ಲೆಕ್ಸ್ ಧ್ವಂಸ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ