ಶ್ರೀರಾಮುಲುಗೆ ಟ್ರಂಪ್ ಬುಲಾವ್..!

Donald trump invited sriramulu and fadnavis to america

02-02-2018

ಬಳ್ಳಾರಿ: ಬಳ್ಳಾರಿ ಸಂಸದ ಶ್ರೀರಾಮುಲು ಅವರಿಗೆ ಅಮೇರಿಕದ ಅಧ್ಯಕ್ಷ ಅಮೆರಿಕಾಗೆ ಬರುವಂತೆ ಆಹ್ವಾನ ನೀಡಿದ್ದಾರೆ. ಇದೇ ಫೆಬ್ರವರಿ 7 ಮತ್ತು 8ರಂದು ನಡೆಯಲಿರುವ ಔತಣಕೂಟಕ್ಕೆ ಶ್ರೀರಾಮುಲುಗೆ ವಿಶೇಷ ಅಹ್ವಾನ ನೀಡಿದ್ದಾರೆ. ವಿಶ್ವದ 130 ರಾಷ್ಟ್ರಗಳ ಗಣ್ಯರಿಗೆ ಈ ರೀತಿ ಆಹ್ವಾನ ನೀಡಿರುವ ಅಮೇರಿಕದ ಅಧ್ಯಕ್ಷ ಡೋನಲ್ಡ್ ಟ್ರಂಪ್, ಭಾರತದಿಂದ ಬಳ್ಳಾರಿ ಸಂಸದ ಶ್ರೀರಾಮುಲು ಹಾಗೂ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್‌‌ ಅವರನ್ನು ಆಹ್ವಾನಿಸಿದ್ದಾರೆ.

ಒಕ್ಕೂಟ ವ್ಯವಸ್ಥೆಯ ರಾಷ್ಟ್ರಗಳ ಗಣ್ಯರಿಗೆ ಪ್ರತಿ ವರ್ಷ ಔತಣಕೂಟ ಹಾಗೂ ಶಾಂತಿ ಸ್ಥಾಪನೆ ಬಗ್ಗೆ ನಡೆಯುವ ಚರ್ಚೆಗೆ ಅಹ್ವಾನ ನೀಡಿದ್ದಾರೆ. ಅದರಂತೆ ಈಗಾಗಲೇ ಅಮೇರಿಕಾಕ್ಕೆ ತೆರಳಲು ಸಿದ್ಧತೆ ನಡೆಸಿರುವ ಶ್ರೀರಾಮುಲು ಅವರಿಗೆ, ಪಕ್ಷದ ನಾಯಕರ ಗ್ರೀನ್ ಸಿಗ್ನಲ್ ಸಿಗಬೇಕಾಗಿದೆ. ಅದರಂತೆ ಗ್ರೀನ್ ಸಿಕ್ಕಿದರೆ ಭಾರತದ ಪರವಾಗಿ ಅವರು ಅಮೇರಿಕಾದ ಅಧ್ಯಕ್ಷರ ಔತಣಕೂಟದಲ್ಲಿ ಭಾಗಿಯಾಗಲಿದ್ದಾರೆ.


ಸಂಬಂಧಿತ ಟ್ಯಾಗ್ಗಳು

B.Sriramulu Devendra Fadnavis ಔತಣಕೂಟ ಟ್ರಂಪ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ