ಮೋದಿ ಬುಕ್ ಬಂತು…

Modi Book for students ‘Exam Warriors

02-02-2018

ಪ್ರಧಾನಿ ನರೇಂದ್ರ ಮೋದಿ ಅವರು ವಿದ್ಯಾರ್ಥಿಗಳಿಗಾಗಿ ಹೊಸ ಪುಸ್ತಕವನ್ನು ಬರೆದಿದ್ದಾರೆ. ಹೌದು, ಆರೆಸ್ಸೆಸ್ ಹಿನ್ನೆಲೆಯಿಂದ ಬಂದ ಪ್ರಧಾನಿ ನರೇಂದ್ರ ಮೋದಿ ಅವರದ್ದು ಬಹುಮುಖಿ ವ್ಯಕ್ತಿತ್ವ. ತಾವು ಪ್ರಧಾನಿಯಾದ ನಂತರ ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್ ಮೂಲಕ ಹಲವಾರು ವಿಚಾರಗಳ ಬಗ್ಗೆ ದೇಶದ ನಾಗರಿಕರ ಜೊತೆ ತಮ್ಮ ಅಭಿಪ್ರಾಯ ಅನಿಸಿಕೆ ಹಂಚಿಕೊಂಡಿದ್ದಾರೆ, ಪತ್ರದ ಮೂಲಕ ನಾಗರಿಕರು ಬರೆದು ಕಳಿಸಿದ ಅಭಿಪ್ರಾಯ, ಐಡಿಯಾಗಳನ್ನು ಸ್ವೀಕರಿಸಿದ್ದಾರೆ. ಇದರ ಜೊತೆಗೆ ಪರೀಕ್ಷೆ ವೇಳೆ ವಿದ್ಯಾರ್ಥಿಗಳು ಎದುರಿಸುವ ಒತ್ತಡಗಳ ನಿರ್ವಹಣೆ ಬಗ್ಗೆಯೂ ಸಲಹೆ ಸೂಚನೆ ನೀಡಿದ್ದಾರೆ.

ಇದೀಗ, ಅದೇ ವಿಚಾರದ ಮುಂದುವರಿದ ಭಾಗವಾಗಿ ‘Exam Warriors’ ಅನ್ನೋ ಹೆಸರಿನ ಪುಸ್ತಕ ಬರೆದಿದ್ದಾರೆ. ಫೆಬ್ರವರಿ 3 ರಂದು ಬಿಡುಗಡೆಯಾಗಲಿರುವ ಈ ಪುಸ್ತಕದಲ್ಲಿ ಯೋಗಾಭ್ಯಾಸ ಮಾಡುವುದೂ ಸೇರಿದಂತೆ, ವಿದ್ಯಾರ್ಥಿಗಳು ಯಾವ ರೀತಿಯಲ್ಲಿ ಒತ್ತಡ ಮತ್ತು ಆತಂಕವನ್ನು ಎದುರಿಸಬಹುದು ಎಂಬ ಬಗ್ಗೆ ಹಲವು ರೀತಿಯ ಸಲಹೆಗಳನ್ನು ನೀಡಿದ್ದಾರೆ.
ಸ್ವತಃ ನರೇಂದ್ರ ಮೋದಿಯವರೇ ಪರಿಕಲ್ಪನೆ ಮಾಡಿ ರಚಿಸಿರುವ ಈ ಪುಸ್ತಕದಲ್ಲಿ, ವಿದ್ಯಾರ್ಥಿಗಳು ಕೇವಲ ಅಂಕಗಳಿಗೆ ಮಾತ್ರ ಪ್ರಾಶಸ್ತ್ಯ ನೀಡುವ ಬದಲು, ಜ್ಞಾನ ಮತ್ತು ಕೌಶಲ್ಯಗಳನ್ನು ಬೆಳೆಸಿಕೊಳ್ಳುವುದರ ಕಡೆ ಆದ್ಯತೆ ನೀಡಬೇಕೆಂದು ಹೇಳುತ್ತಾರಂತೆ. ಅಂದ ಹಾಗೆ, ಇದು ಮೋದಿಯವರು ಬರೆದಿರುವ ಮೊದಲ ಪುಸ್ತಕವೇನೂ ಅಲ್ಲ, ಅವರು ಹಲವಾರು ವಿಚಾರಗಳ ಬಗ್ಗೆ ಈಗಾಗಲೇ ಒಂದು ಡಜನ್ಗೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Narendra Modi ‘Exam Warriors' ರೇಡಿಯೋ ಐಡಿಯಾ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ