2018ರ ಕೇಂದ್ರ ಬಜೆಟ್ ಮುಖ್ಯಾಂಶಗಳು

Budget Highlights-2018

01-02-2018

ವೈಯಕ್ತಿಕ ಆದಾಯ ತೆರಿಗೆಯಲ್ಲಿ ಯಾವುದೇ ಬದಲಾವಣೆ ಇಲ್ಲ. 

ಸಾರಿಗೆ ಭತ್ಯೆ ಮತ್ತು ವೈದ್ಯಕೀಯ ವೆಚ್ಚಕ್ಕಾಗಿ 40 ಸಾವಿರ ರೂಪಾಯಿ ಸ್ಟಾಂಡರ್ಡ್ ಡಿಡಕ್ಷನ್ ಸೌಲಭ್ಯ.

ಹಿರಿಯ ನಾಗರಿಕರು ಬ್ಯಾಂಕ್ ಅಥವ ಅಂಚೆ ಕಚೇರಿಗಳಲ್ಲಿ ಇರಿಸಿರುವ ಠೇವಣಿಗಳಿಂದ ಬರುವ 50

ಸಾವಿರ ರೂಪಾಯಿಗಳ ವರೆಗಿನ ಬಡ್ಡಿಗೆ ತೆರಿಗೆ ವಿನಾಯಿತಿ.

ಮೊಬೈಲ್ ಫೋನ್‌ಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಶೇ 15ರಿಂದ ಶೇ 20ಕ್ಕೆ ಏರಿಸಲಾಗಿದ್ದು ಇದರಿಂದ ಹೊಸ ಮೊಬೈಲ್‌ ಫೋನ್‌ಗಳು ಒಂದಿಷ್ಟು ದುಬಾರಿ.

ರಾಷ್ಟ್ರಪತಿಯವರ ಸಂಬಳ ತಿಂಗಳಿಗೆ 5 ಲಕ್ಷ ರೂಪಾಯಿಗಳಿಗೆ ಏರಿಕೆ. ಉಪರಾಷ್ಟ್ರಪತಿಯವರ ಸಂಬಳ ತಿಂಗಳಿಗೆ 4 ಲಕ್ಷ ರೂಪಾಯಿಗಳಿಗೆ ಮತ್ತು ರಾಜ್ಯಪಾಲರ ಸಂಬಳ ತಿಂಗಳಿಗೆ 3.5 ಲಕ್ಷಕ್ಕೆ ಏರಿಕೆ.

ಬಿಟ್ ಕಾಯಿನ್ ರೀತಿಯ ಕ್ರಿಪ್ಟೊ ಕರೆನ್ಸಿ ಬಳಕೆಗೆ ಕಡಿವಾಣ.

600 ಪ್ರಮುಖ ರೈಲು ನಿಲ್ದಾಣಗಳ ಅಭಿವೃದ್ಧಿಗೆ ಕ್ರಮ.

ಬೆಂಗಳೂರು ಮಹಾನಗರಕ್ಕೆ 160 ಕಿಲೋ ಮೀಟರ್ ಸಬ್‌ಅರ್ಬನ್ ರೈಲು ಸಂಚಾರ ಜಾಲದ ವ್ಯವಸ್ಥೆ.

ಬುಡಕಟ್ಟು ಜನಾಂಗದವರಿಗಾಗಿ ನವೋದಯ ಮಾದರಿಯ ಏಕಲವ್ಯ ಶಾಲೆಗಳ ಸ್ಥಾಪನೆ.

ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿಗಾಗಿ 14.34 ಲಕ್ಷ ರೂಪಾಯಿ ನಿಗದಿ.

ಬೋಧನಾ ತರಬೇತಿ ಪಡೆಯದೇ ಇರುವ ಶಿಕ್ಷಕರಿಗೆ ಶಿಕ್ಷಣ ಹಕ್ಕು ಕಾಯ್ದೆ ಅಡಿ ಬಿ.ಎಡ್‌ ತರಬೇತಿ ಪಡೆಯುವ ಸೌಲಭ್ಯ.

ಉಜ್ವಲ ಯೋಜನೆಯಡಿ 8 ಕೋಟಿ ಮಹಿಳೆಯರ ಮನೆಗಳಿಗೆ ಉಚಿತ ಎಲ್‌ಪಿಜಿ ಗ್ಯಾಸ್ ಸಂಪರ್ಕ.

ಸೌಭಾಗ್ಯ ಯೋಜನೆಯಡಿ 4 ಕೋಟಿ ಬಡ ಕುಟುಂಬಗಳಿಗೆ ವಿದ್ಯುತ್ ಸಂಪರ್ಕ.

ಸ್ವಚ್ಛಭಾರತ ಯೋಜನೆಯಡಿ 2 ಕೋಟಿ ಶೌಚಾಲಯಗಳ ನಿರ್ಮಾಣ.

ಕ್ಷಯ ರೋಗಕ್ಕೆ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಪೌಷ್ಟಿಕ ಆಹಾರ ನೀಡಲು ಆಯುಷ್ಮಾನ್ ಯೋಜನೆಯಡಿ 600 ಕೋಟಿ ರೂಪಾಯಿ ಬಿಡುಗಡೆ.

ರಾಷ್ಟ್ರೀಯ ಆರೋಗ್ಯ ಸುರಕ್ಷತಾ ಯೋಜನೆಯಡಿ ದೇಶದ 10 ಕೋಟಿ ಬಡ ಕುಟುಂಬಗಳಿಗೆ 5 ಲಕ್ಷ ರೂಪಾಯಿಗಳ ಆರೋಗ್ಯ ವಿಮೆ. ಸುಮಾರು 50 ಕೋಟಿ ಜನರಿಗೆ ಲಾಭವಾಗುವ ನಿರೀಕ್ಷೆ. 

ಹೊಸದಾಗಿ 24 ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಸ್ಥಾಪನೆ.

ಚೆನ್ನೈನಲ್ಲಿ 5ನೇ ಪೀಳಿಗೆ ತರಂಗಾಂತರ 5ಜಿ ಸಂಬಂಧ ಅಧ್ಯಯನ ಕೇಂದ್ರ ಸ್ಥಾಪನೆ

100 ಕೋಟಿ ರೂಪಾಯಿಗಳ ವರೆಗೆ ವಹಿವಾಟುಹೊಂದಿರುವ ಕೃಷಿ ಉತ್ಪನ್ನಗಳ ತಯಾರಿಕಾ ಕಂಪನಿಗಳಿಗೆ ಶೇ.100 ರಷ್ಟು ವಿನಾಯಿತಿ.

ಬಿದಿರು ಕೃಷಿ ಪ್ರೋತ್ಸಾಹಕ್ಕಾಗಿ 1290 ಕೋಟಿ ರೂಪಾಯಿಗಳ ನಿಗದಿ.

ಕೃಷಿ ಮಾರುಕಟ್ಟೆಗಳ ಅಭಿವೃದ್ಧಿಗಾಗಿ 2 ಸಾವಿರ ಕೋಟಿ ರೂಪಾಯಿಗಳ ಕೃಷಿ ಮಾರುಕಟ್ಟೆ ನಿಧಿ ಸ್ಥಾಪನೆ.


ಸಂಬಂಧಿತ ಟ್ಯಾಗ್ಗಳು

Arun Jaitley Budjet ವಹಿವಾಟು ಕೃಷಿ ಮಾರುಕಟ್ಟೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ