‘ಭರವಸೆಗಳೆಲ್ಲಾ ಸುಳ್ಳಾಗಿವೆ’-ಖರ್ಗೆ01-02-2018

ನವದೆಹಲಿ: ಚುನಾವಣಾ ದೃಷ್ಟಿಯಿಂದ ಮಂಡಿಸಿರುವ ಬಜೆಟ್‌ನಲ್ಲಿ 2019 ವರ್ಷಕ್ಕೆ ವಿಶೇಷವಾದ ಕೊಡುಗೆಗಳು ಇಲ್ಲ, ತೆರಿಗೆ ಹೊರತು ಪಡಿಸಿ ಇದು ವರ್ಷದ ಬಜೆಟ್ ಅಲ್ಲ ಎಂದು, ಲೋಕಸಭೆಯ ಕಾಂಗ್ರೆಸ್ ಪಕ್ಷದ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ನಾಲ್ಕು ವರ್ಷದಿಂದ ಹೇಳಿದ ಕೆಲಸ ಮಾಡಿಲ್ಲ ಇನ್ನು ಒಂದು ವರ್ಷದಲ್ಲಿ ಏನು ಮಾಡಲು ಸಾಧ್ಯ ಎಂದು ವ್ಯಂಗ್ಯವಾಡಿದರು. ಕೊನೆ ಬಜೆಟ್ ನಲ್ಲಿ ಸಾಕಷ್ಟು ಭರವಸೆಗಳನ್ನು ನೀಡಿದ್ದು, ಭರವಸೆಗಳನ್ನು ಈಡೇರಿಸಿಲ್ಲ ಎಂದು ಗುಡುಗಿದರು.

ರೈತರ ಆದಾಯ ದ್ವಿಗುಣ ಮಾಡುವ ಭರವಸೆ ಸುಳ್ಳು, ಪ್ರಾಥಮಿಕ ಶಿಕ್ಷಣಕ್ಕೆ ಸರಿಯಾದ ಅನುದಾನ ನೀಡಿಲ್ಲ, ಕೇವಲ ಉನ್ನತ ಶಿಕ್ಷಣಕ್ಕಾಗಿ ಹಣ ಮೀಸಲಿದೆ ಈ ಲಾಭ ಕೇವಲ ಉನ್ನತ ವರ್ಗದ ಮಕ್ಕಳಿಗೆ ಸಿಗಲಿದೆ ಆದರೆ ಉತ್ತಮ ಪ್ರಾಥಮಿಕ ಶಿಕ್ಷಣ ಬಡ ಜನರಿಗೆ ಸಿಗಬೇಕಿತ್ತು ಎಂದಿದ್ದಾರೆ. ಇನ್ನು ಕಾರ್ಪೊರೇಟ್ ಪರ ಇಲ್ಲ ಎನ್ನುವ ಕೇಂದ್ರ ಸರ್ಕಾರ ಕಾರ್ಪೊರೇಟ್ ತೆರಿಗೆ ಕಡಿತಗೊಳಿಸಿ ಉದ್ಯಮಿಗಳಿಗೆ ಲಾಭ ಮಾಡುತ್ತಿದೆ ಎಂದು ದೂರಿದರು.

ಕೋಟಿ ಉದ್ಯೋಗ ನೀಡುವ ಭರವಸೆ ಹುಸಿಯಾಗಿದೆ, ಸರ್ಕಾರ ತನ್ನ ಟಾರ್ಗೆಟ್ ರೀಚ್ ಆಗಿಲ್ಲ ಆರೋಗ್ಯ ವಿಮೆ ಬಗ್ಗೆ ಸಂಪೂರ್ಣ ಚಿತ್ರಣ ನೀಡಿಲ್ಲ, ಇನ್ನು ರೈಲ್ವೆ ಬಜೆಟ್ ಕೇಳುವವರೇ ಇಲ್ಲದಂತಾಗಿದೆ. ಯಾದಗಿರಿ ರೈಲ್ವೆ ಪ್ಯಾಕ್ಟರಿ ಅಭಿವೃದ್ಧಿಗೆ ಹಣ ನೀಡಿಲ್ಲ, ಸಾಮಾನ್ಯ ಬಜೆಟ್ ಜೊತೆಗೆ  ರೈಲ್ವೆ ಬಜೆಟ್ ಸೇರಿಸಿ ಸಾಮಾನ್ಯ ಜನರಿಗೆ ಅನ್ಯಾಯ ಮಾಡಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

 


ಸಂಬಂಧಿತ ಟ್ಯಾಗ್ಗಳು

Mallikarjun kharge Budget ಭರವಸೆ ಸಂಸದೀಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ