ರೆಡ್ಡಿ ಬ್ರದರ್ಸ್ ವಿರುದ್ಧ ಟಪಾಲ್ ಗಣೇಶ್ ವಾಗ್ದಾಳಿ

tapal ganesh v/s reddy brothers

01-02-2018

ಬಳ್ಳಾರಿ: ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ವಿರುದ್ಧ ಮತ್ತೆ ಉದ್ಯಮಿ ಟಪಾಲ್ ಗಣೇಶ್ ಧ್ವನಿ‌ ಎತ್ತಿದ್ದಾರ. ಈ ಕುರಿತು ಬಳ್ಳಾರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು,  ಕಾಂಗ್ರೆಸ್ ನವರು ಕೇಳಿದರೆ ಎಡಗೈಯಿಂದ ಕೊಡುತ್ತೇನೆ ಎಂಬ ಜನಾರ್ದನ ರೆಡ್ಡಿ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಟಪಾಲ್ ಗಣೇಶ್ ಅವರು, ಬಲಗೈಯಿಂದ ಎಷ್ಟು ಜನರಿಗೆ ಸಹಾಯ ಮಾಡಿದ್ದೀರಿ ಎಂದು ಪ್ರಶ್ನಿಸಿದ್ದಾರೆ.

ಜನಾರ್ದನ ರೆಡ್ಡಿ ಸಾಮಾನ್ಯ ಪೊಲೀಸ್ ಪೇದೆ ಮಗ, ಇವರ ಬಳಿ ಅಪಾರ ಸಂಪತ್ತು ಹೇಗೆ ಬಂತು, ಅಕ್ರಮ ಗಣಿಗಾರಿಕೆ ಮಾಡಿ ಅದರಿಂದ ಸಾಕಷ್ಟು ಹಣ ಮಾಡಿದ್ದೀರಿ, ಅಕ್ರಮವಾಗಿ ಗಣಿಗಾರಿಕೆ ಮಾಡಿದ ಹಣ ಹಾಗೂ ಆಸ್ತಿಯನ್ನು ಅಧಿಕಾರಿಗಳು ಸೀಜ್ ಮಾಡಿದ್ದಾರೆ, ಆದರೂ ಹಣ ಎಲ್ಲಿಂದ ಬರ್ತಿದೆ, 29 ಲಕ್ಷ ಟನ್ ಅಕ್ರಮ ಗಣಿಯನ್ನು ಲೂಟಿ ಮಾಡಿದ್ದವರು ನೀವು ರೆಡ್ಡಿಗಳೇ ಎಂದು ಕುಟುಕಿದ್ದಾರೆ.

ಸೋಮಶೇಖರ್ ರೆಡ್ಡಿ ಮಾಡಿದ ಅಕ್ರಮ ಗಣಿಗಾರಿಕೆಯಿಂದ ಈ ನೆಲದ ಸಂಪತ್ತು ಲೂಟಿಯಾಗಿದೆ, ಅದರೂ ‌ಅದು ಹೇಗೆ ಸೋಮಶೇಖರ್ ರೆಡ್ಡಿಗೆ ಟಿಕೆಟ್ ಕೊಡುತ್ತೀರಾ ಯಡಿಯೂರಪ್ಪ ನವರೇ, ರೆಡ್ಡಿಗಳ ಕಾಲದಲ್ಲಿ ರಿಪಬ್ಲಿಕ್ ಬಳ್ಳಾರಿ ಇತ್ತು. ಮಾಜಿ ಕಾರ್ಪೋರೆಟರ್ ಪದ್ಮಾವತಿ ಯಾದವ್ ಕೊಲೆ ಪ್ರಕರಣ ಸಿಬಿಐ ತನಿಖೆ ನೀಡಲು ಗಣೇಶ್ ಅವರು ಒತ್ತಾಯಿಸಿದ್ದಾರೆ. ಅಲ್ಲದೇ ಸಾಮಾನ್ಯ ಜನರು ರಾಜಕೀಯ ಮಾಡಲಾರದ ಸ್ಥಿತಿ ತಂದಿಟ್ಟಿದ್ದಿರಿ ಎಂದು ಹರಿಹಾಯ್ದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ