ಟಂಟಂ ವಾಹನ ಪಲ್ಟಿ: ಚಾಲಕ ಸಾವು

5 serious injury in mini van accident in yadagiri

01-02-2018

ಯಾದಗಿರಿ: ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಹೂವಿನಾಳ ಕ್ರಾಸ್ ಬಳಿ, ಟಂಟಂ ವಾಹನ ಪಲ್ಟಿಯಾಗಿದ್ದು, ಸ್ಥಳದಲ್ಲೇ ವಾಹನ ಚಾಲಕ ಸಾವನ್ನಪ್ಪಿದ್ದಾನೆ. ದೇವಪ್ಪ (36) ಮೃತ ಚಾಲಕ. ಇನ್ನು ಘಟನೆಯಲ್ಲಿ ಐವರಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯರ ಸಹಾಯದಿಂದ ಗಾಯಾಳುಗಳನ್ನು ಸುರಪುರ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರೆಲ್ಲರೂ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕು ನಿವಾಸಿಗಳು ಎಂದು ತಿಳಿದು ಬಂದಿದೆ. ತಿಂಥಣಿ ಮೌನೇಶ್ವರ ಜಾತ್ರೆಗೆ ತೆರಳುತ್ತಿದ್ದ ವೇಳೆ, ಈ ಅವಘಡ ಸಂಭಿಸಿದೆ. ಸುರಪುರ ತಾಲ್ಲೂಕಿನ ರಸ್ತೆಯಲ್ಲಿ ವೇಗವಾಗಿ ಬರುತ್ತಿದ್ದ ಟಂಟಂ ವಾಹನಕ್ಕೆ ನಾಯಿ ಅಡ್ಡಬಂದಿದ್ದು, ಅದನ್ನು ತಪ್ಪಿಸುವ ಆತುರದಲ್ಲಿ ನಿಯಂತ್ರಣ ತಪ್ಪಿ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಸುರಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ