ವ್ಯಕ್ತಿ ತಲೆ ಕತ್ತರಿಸಿ ಭೀಕರ ಕೊಲೆ

Horrific murder in nelamangala

01-02-2018

ಬೆಂಗಳೂರು: ಬಾಡಿಗೆ ಹೆಚ್ಚಿಗೆ ನೀಡುವ ವಿಚಾರವಾಗಿ ವ್ಯಕ್ತಿಯೊಬ್ಬರನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆಯು, ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲ್ಲೂಕಿನ ಕೆಂಪಲಿಂಗನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮಾರಕಾಸ್ತ್ರಗಳಿಂದ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆಗೈದಿದ್ದಾರೆ. ನೆಲಮಂಗಲ ಪಟ್ಟಣದ ರಾಯನ್ ನಗರದ ನಿವಾಸಿ ಆರ್.ಎಕ್ಸ್.ಮಂಜು(37) ಕೊಲೆಯಾದ ವ್ಯಕ್ತಿ.

ಮೃತ ಆರ್.ಎಕ್ಸ್.ಮಂಜು ಕೆಂಪಲಿಂಗನಹಳ್ಳಿ ಗ್ರಾಮದ ಬಳಿಯ ತನ್ನ ಜಮೀನಿನಲ್ಲಿ ಅಲ್ತಾಫ್ ಎಂಬುವನಿಗೆ ಸಣ್ಣ ಫ್ಯಾಕ್ಟರಿ ನಡೆಸಲು ಜಾಗ ನೀಡಿದ್ದಾನೆ. ಅದರಂತೆ ಅಲ್ತಾಫ್ ಮತ್ತು ಮಕ್ಕಳು ಎಂ.ಡಿ.ಅಲಿ ವುಡ್ಸ್ ಎಂಬ ಫ್ಯಾಕ್ಟರಿ ನಡೆಸುತ್ತಿದ್ದು, ಮೃತ ಮಂಜು ಕಳೆದ ಎಂಟು ದಿನಗಳ ಹಿಂದೆ, ಜನವರಿ 23ರ ಸಂಜೆ ಫ್ಯಾಕ್ಟರಿ ಹತ್ತಿರ ಬಂದಿದ್ದು, ಬಾಡಿಗೆ ಹೆಚ್ಚಿಗೆ ನೀಡುವಂತೆ ಒತ್ತಡ ಹೇರಿದ್ದಾನೆ.

ಇನ್ನು ಬಾಡಿಗೆ ಹೆಚ್ಚು ನೀಡುವ ವಿಚಾರವಾಗಿ ರೋಸಿ ಹೋಗಿದ್ದ ಅಲ್ತಾಫ್ ಮತ್ತು ಇಬ್ಬರು ಮಕ್ಕಳು ಆಕ್ರೋಶಗೊಂಡು ಇಂದು, ಮಾರಕಾಸ್ತ್ರಗಳಿಂದ ಮಂಜನ ಮೇಲೆ ಹಲ್ಲೆ ನೆಡೆಸಿದ್ದಾರೆ, ಅಲ್ತಾಫ್ ಮತ್ತು ಮಕ್ಕಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ ರಭಸಕ್ಕೆ ಮಂಜನ ಪ್ರಾಣ ಪಕ್ಷಿ ಹಾರಿ ರುಂಡ, ಮುಂಡ ಬೇರ್ಪಟ್ಟಿದೆ. ಇದರಿಂದ ಗಾಬರಿಗೊಂಡ ಅಲ್ತಾಫ್ ಮೃತ ಮಂಜನ ತಲೆಯನ್ನು ಆತನ ಜಮೀನಿನಲ್ಲೇ ಹೂತಿಟ್ಟು ದೇಹವನ್ನ ಮಾತ್ರ ಕೆಂಗೇರಿ ಮೋರಿಯಲ್ಲಿ ಬಿಸಾಕಿದ್ದಾರೆ.

ಬಳಿಕ ಅಲ್ತಾಫ್ ಸಂಬಂಧಿಕನೊಬ್ಬನಿಗೆ ಕೃತ್ಯದ ವಿಚಾರ ತಿಳಿಸಿದ್ದು, ಆತ ಸಿಸಿಬಿ ಬಳಿ ವಿಚಾರವನ್ನು ತಿಳಿಸಿದ್ದು, ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಇನ್ನೂ ಕೃತ್ಯವೆಸಗಿದ ಆರೋಪಗಳಿಂದ ಮಾಹಿತಿ ಪಡೆದ ಸಿಸಿಬಿ ತಂಡ ಮತ್ತು ಪೊಲೀಸ್ ಇಲಾಖೆ ಮೃತ ಆರ್.ಎಕ್ಸ್ ಮಂಜನ ನೆಲಮಂಗಲದ ಕೆಂಪಲಿಂಗನಹಳ್ಳಿ ಗ್ರಾಮದ ಜಮೀನಿಗೆ ಭೇಟಿ ನೀಡಿ, ಶೆಡ್ ಸ್ಥಳ ಮಾಜರ್ ಮಾಡಿ, ಹೂತಿಟ್ಟ ರುಂಡವನ್ನು ಹೊರ ತೆಗೆದು ವಶಕ್ಕೆ ಪಡೆದಿದ್ದಾರೆ. ಸದ್ಯ ಈಗ ಮಿಸ್ಸಿಂಗ್ ಪ್ರಕರಣ ದಾಖಲಾಗಿರೋ ನೆಲಮಂಗಲ ಗ್ರಾಮಾಂತರ ಠಾಣೆ ಪೊಲೀಸರು, ಆರೋಪಿಗಳನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Murder Horrific ಸಿಸಿಬಿ ಮಿಸ್ಸಿಂಗ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ