ಅಪಘಾತ: ಎಎಸ್ಐ ಸಾವು

Accident: ASI died in kalaburagi

01-02-2018

ಕಲಬುರಗಿ: ಅಪಘಾತವೊಂದರಲ್ಲಿ ಎಎಸ್ಐ ಒಬ್ಬರು ಸಾವನ್ನಪ್ಪಿರುವ ದಾರುಣ ಘಟನೆಯು, ಕಲಬುರಗಿಯಲ್ಲಿ ನಡೆದಿದೆ. ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಅಪಘಾತವಾಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಂಬಣ್ಣಾ(55) ಎಂದು ಮೃತ ಎಎಸ್ಐ ಅನ್ನು ಗುರುತಿಸಲಾಗಿದೆ.

ಕಲಬುರಗಿ ತಾಲ್ಲೂಕಿನ ನಂದೂರು ಕೈಗಾರಿಕಾ ಪ್ರದೇಶದ ಬಳಿ ಈ ದುರ್ಘಟನೆ ಸಂಭವಿಸಿದ್ದು, ಅಂಬಣ್ಣಾ, ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ಶಹಬಾದ್ ಪೊಲೀಸ್ ಠಾಣೆಯಲ್ಲಿ ಎಎಸ್ಐ ಆಗಿದ್ದರು. ಕಲಬುರಗಿ ನಗರದಿಂದ ಶಹಬಾದ್ ಪಟ್ಟಣಕ್ಕೆ ಕೆಲಸದ ಮೇಲೆ ಹೋಗುತ್ತಿದ್ದಾಗ ಅಪಘಾತವಾಗಿದೆ. ಆದರೆ ಯಾವ ವಾಹನ ಗುದ್ದಿದೆ ಎಂದು ತಿಳಿದು ಬಂದಿಲ್ಲ. ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Police ASI Accident ಅಪಘಾತ ವಿಶ್ವವಿದ್ಯಾಲಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ