ಸಿ.ಟಿ.ರವಿ ವಿರುದ್ಧ ಚಾರ್ಜ್ ಶೀಟ್..?

charg sheet against c.t ravi...?

01-02-2018

ಚಿಕ್ಕಮಗಳೂರು: ಸರ್ಕಾರಿ ಆಸ್ತಿ‌ ಹಾನಿ ಮಾಡಲಾಗಿದೆ ಎಂಬ ಆರೋಪದಡಿ, ಬಿಜೆಪಿ ಶಾಸಕ ಸಿ.ಟಿ.ರವಿ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ಮರಳು ಸಾಗಾಣಿಕೆಗೆ ಪರ್ಮಿಟ್ ನೀಡುವಂತೆ 2014ರಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ವೇಳೆ ಜಿಲ್ಲಾಧಿಕಾರಿ ಕಚೇರಿ ಗಾಜು ಪುಡಿ ಮಾಡಿದ್ದರು ಎಂದು, ಕಚೇರಿ ಸಹಾಯಕಿ ಭಾಗ್ಯ ಎಂಬುವರು, ಸರ್ಕಾರಿ ಆಸ್ತಿ ಹಾನಿ ಮಾಡಿರುವುದಾಗಿ ದೂರು ನೀಡಿದ್ದರು.

143, 147, 186, ಸೇರಿದಂತೆ ಘಟನೆ ಸಂಬಂಧ ಇತರೆ ಕಾಯ್ದೆಗಳಡಿಯಲ್ಲಿ ದೂರು ದಾಖಲಾಗಿತ್ತು. ಪ್ರಕರಣ ಸಂಬಂಧ ಸಿ.ಟಿ.ರವಿ ವಿಚಾರಣೆಗೆ ಪೋಲಿಸ್ ಮಹಾ ನಿರ್ದೇಶಕರಿಂದ ಗೃಹ ಮಂತ್ರಿಗಳಿಗೆ ಪತ್ರ ಬರೆಯಲಾಗಿತ್ತು. ಇನ್ನು ರಾಜ್ಯಪಾಲರ ಆದೇಶಾನುಸಾರ‌ ಸಿ.ಆರ್.ಪಿ.ಸಿ ಕಲಂ 197ರ ಅಡಿಯಲ್ಲಿ ಅಭಿಯೋಗಗೊಳಿಸಲು ಅನುಮತಿ ನೀಡಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲು ಅನುಮತಿ ನೀಡಿದೆ ಎಂದು ತಿಳಿದು ಬಂದಿದೆ.


ಸಂಬಂಧಿತ ಟ್ಯಾಗ್ಗಳು

C.T.Ravi Court ಗೃಹ ಮಂತ್ರಿ ನ್ಯಾಯಾಲಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ