ಬೀದರ್ ನ ಔರಾದ್ ನಲ್ಲಿ ಕಟ್ಟೆಚ್ಚರ

police high security in bidar aurad

01-02-2018

ಬೀದರ್: ಬೀದರ್ನ ಪೂಜಾ ಹಡಪದ ಬಾಲಕಿ ಮೇಲೆ ಅತ್ಯಾಚಾರ ಮತ್ತು ಕೋಲೆ ಖಂಡಿಸಿ, ಇಂದು ಜಿಲ್ಲೆಯ ಔರಾದ್ ಬಂದ್ಗೆ ಹಿಂದುಪರ ಸಂಘಟನೆಗಳ ಮುಖಂಡರು ಪಟ್ಟು ಹಿಡಿದಿದ್ದಾರೆ. ಆದರೆ, ಬಂದ್ಗೆ ಜಿಲ್ಲಾಡಳಿತ ಅನುಮತಿ ನೀಡಿಲ್ಲ. ಆದರೂ ಸಹ ಬಂದ್ ಮಾಡಿಯೇ ತೀರುತ್ತೇವೆ ಎಂದು ಹಿಂದುಪರ ಸಂಘಟನೆಗಳ ಮುಖಂಡರು ಹೇಳಿದ್ದಾರೆ. ಇದರಿಂದ ಬೀದರ್ನ ಔರಾದ್ ನಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಇನ್ನು ಔರಾದ್ ಪಟ್ಟಣದಲ್ಲಿ ಬಸ್ಗಳು ರಸ್ತೆಗಿಳಿದಿಲ್ಲ, ಅಂಗಡಿ ಮುಂಗಟ್ಟುಗಳನ್ನು ಯಾರು ತೆರೆಯದಿದ್ದು, ಸಂಚಾರ ಸಂಪೂರ್ಣ ಸ್ತಬ್ಧವಾಗಿದೆ. ಸ್ಥಳದಲ್ಲಿ ಎಸ್ಪಿ, ಡಿ.ದೇವರಾಜು ಹಾಗು ಹಿರಿಯ ಅಧಿಕಾರಿಗಳು ಬೀಡು ಬಿಟ್ಟಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Bandh Hindu organisations ಅತ್ಯಾಚಾರ ಜಿಲ್ಲಾಡಳಿತ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ