ಕೋಪ ನಿರ್ವಹಣಾ ಪಾರ್ಕ್?

Anger Management Park?

31-01-2018

ಹಲವು ಕಾರಣಗಳಿಂದಾಗಿ ಮನುಷ್ಯರಿಗೆ ಕೋಪ ತಾಪಗಳು ಬರುವುದು ಸಾಮಾನ್ಯ. ಈ ರೀತಿಯ ಕೋಪ ತಾಪ ಮತ್ತು ಆವೇಶಗಳನ್ನು ನಿರ್ವಹಿಸಲು ಯೋಗವೂ ಸೇರಿದಂತೆ ಹಲವು ರೀತಿಯ ಉಪಾಯಗಳನ್ನು ಸೂಚಿಸಲಾಗುತ್ತದೆ. ಆದರೆ, ಬಾಂಗ್ಲಾ ದೇಶದ ರಾಜಧಾನಿ ಢಾಕಾದಲ್ಲಿ ಕೋಪ ನಿರ್ವಹಣೆಗೆಂದೇ ಒಂದು ವಿಶೇಷ ಪಾರ್ಕ್ ಸ್ಥಾಪನೆಗೆ ಅಲ್ಲಿನ ನಗರ ಪಾಲಿಕೆ ಮುಂದಾಗಿದೆ. ಒಂದೂವರೆ ಕೋಟಿ ಜನಸಂಖ್ಯೆ ಹೊಂದಿರುವ ಈ ಮಹಾನಗರದ 29 ಎಕರೆಗಳಷ್ಟು ಪ್ರದೇಶದಲ್ಲಿ ‘ಗೋಸ್ವಾ ನಿಬಾರೊಣಿ’ ಪಾರ್ಕ್ ಎಂಬ ವಿನೂತನ ಉದ್ಯಾನ ನಿರ್ಮಿಸಲಾಗುತ್ತಿದೆ. ಈ ಪಾರ್ಕ್ ನಲ್ಲಿ ಒಂದು ಸರೋವರ, ಮನಸ್ಸಿಗೆ ಹಿತವೆನ್ನಿಸುವ ಸಂಗೀತ ಮತ್ತು ಟಿವಿ ಸ್ಕ್ರೀನ್‌ಗಳ ಜೊತೆಗೆ ತಿಂಡಿ ತಿನಿಸುಗಳ ಮಾರಾಟ ವ್ಯವಸ್ಥೆಯೂ ಇರುತ್ತದಂತೆ.  ಆದರೆ, ಇವೆಲ್ಲ ವ್ಯವಸ್ಥೆಗಳಿರುವ ಪಾರ್ಕ್‌,ಇತರೆ ಪಾರ್ಕುಗಳಿಗಿಂತ ಹೇಗೆ ಭಿನ್ನ ಅನ್ನುವ ಪ್ರಶ್ನೆ ಕೇಳಿ ಬಂದಿದ್ದು, ಇದೂ ಕೂಡ ವಂಚಕರು, ಮಾದಕ ವಸ್ತು ಮಾರಾಟಗಾರರು ಮತ್ತು ವೇಶ್ಯೆಯರು ದಂಧೆ ನಡೆಸುವ ಜಾಗವಾಗಲಿದೆ ಎಂಬ ಟೀಕೆಗಳು ವ್ಯಕ್ತವಾಗಿವೆ.

 


ಸಂಬಂಧಿತ ಟ್ಯಾಗ್ಗಳು

Stressed Out Bangladesh ಆವೇಶ ಗೋಸ್ವಾ ನಿಬಾರೊಣಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ