ಮೆಟ್ರೋ ಪಿಲ್ಲರ್ ಗೆ ಕ್ಯಾಂಟರ್ ಡಿಕ್ಕಿ

A cement canter hitted metro pillar: driver spot out

31-01-2018

ಬೆಂಗಳೂರು: ಕೆಂಗೇರಿಯ ದುಬಾಸಿ ಪಾಳ್ಯದ ಬಳಿ ಮೈಸೂರು ಕಡೆಗೆ ಹೋಗುತ್ತಿದ್ದ 16 ಚಕ್ರದ ಕ್ಯಾಂಟರ್ ಲಾರಿ ಆಯತಪ್ಪಿ ಮೆಟ್ರೊ ಪಿಲ್ಲರ್‍ ಗೆ  ಡಿಕ್ಕಿ ಹೊಡೆದು ಚಾಲಕ ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ಇಂದು ನಸುಕಿನಲ್ಲಿ ನಡೆದಿದೆ. ಮೃತಪಟ್ಟವರನ್ನು ಆಂಧ್ರ ಮೂಲದ ಶಿವಯ್ಯ (29)ಎಂದು ಗುರುತಿಸಲಾಗಿದೆ. ಮದನಪಲ್ಲಿಯಿಂದ ಸಿಮೆಂಟ್ ಚೀಲಗಳನ್ನು ತುಂಬಿಕೊಂಡು ಮೈಸೂರಿಗೆ ಹೋಗುತ್ತಿದ್ದ 16 ಚಕ್ರದ ಕ್ಯಾಂಟರ್ ಲಾರಿ ಮಾರ್ಗಮಧ್ಯೆ ದುಬಾಸಿ ಪಾಳ್ಯದ ಬಳಿ ಮೆಟ್ರೊ ಪಿಲ್ಲರ್‍ಗೆ ಅಪ್ಪಳಿಸಿದೆ.

ಡಿಕ್ಕಿಯ ರಭಸಕ್ಕೆ ಕ್ಯಾಂಟರ್ ಮುಂಭಾಗ ಸಂಪೂರ್ಣ ಜಖಂಗೊಂಡು ಅದರೊಳಗೆ ಸಿಕ್ಕಿಹಾಕಿಕೊಂಡು ಮೃತಪಟ್ಟಿದ್ದ ಶಿವಯ್ಯನನ್ನು ಹೊರ ತೆಗೆಯಲು ಪೊಲೀಸರು ಹರಸಾಹಸ ಪಡಬೇಕಾಯಿತು. ಕ್ರೇನ್ ಬಳಸಿ ಲಾರಿಯನ್ನು ತೆರವುಗೊಳಿಸಿರುವ ಕೆಂಗೇರಿ ಸಂಚಾರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Metro Accident ಮೆಟ್ರೊ ಪಿಲ್ಲರ್‍ ಸಿಮೆಂಟ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ