ಐಸಿಸ್ ಗೆ ಮಹಿಳೆ ಮಾರಾಟ ಯತ್ನ..!

9 members a gang tried to sell a women to isis in bengaluru

31-01-2018

ಬೆಂಗಳೂರು: ಕೇರಳ ಮೂಲದ ಮಹಿಳೆಯೊಬ್ಬರನ್ನು ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆ್ಯಂಡ್ ಇರಾನ್ (ಐಸಿಸ್)ಉಗ್ರ ಸಂಘಟನೆಗೆ ಮಾರಾಟ ಮಾಡಲು ಯತ್ನ ನಡೆಸಿದ್ದ ನಗರದ ಮೂವರು ಸೇರಿ 9 ಮಂದಿ ವಿರುದ್ಧ ರಾಷ್ಟ್ರೀಯ ತನಿಖಾ ದಳ(ಎನ್‍ಐಎ)ಪ್ರಕರಣ ದಾಖಲಿಸಿದೆ.

ಬೆಂಗಳೂರಿನ ದಾನೀಶ್ ನಜೀಬ್, ಇಲಿಯಾಸ್ ಮೊಹಮ್ಮದ್ ಮತ್ತು ಗಾಜಿಲಾ ಸೇರಿದಂತೆ ಮೊಹಮ್ಮದ್ ರಿಯಾಸ್ ರಶೀದ್, ನಹಾಸ್ ಅಬ್ದುಲ್ ಖಾದರ್, ಮೊಹಮ್ಮದ್ ನಾಜೀಶ್ ಟಿ.ಕೆ, ಅಬ್ದುಲ್ ಮುಹಾಸಿನ್ ಕೆ.ಫವಾಸ್ ಜಮಾಲ್, ಮೊಯಿನ್ ಪಟೇಲ್ ವಿರುದ್ಧ ಎನ್‍ಐಎಅಧಿಕಾರಿಗಳು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ನಾನು ವಿವಾಹವಾಗಿದ್ದ ಪತಿ ರಶೀದ್ ಹಿಂಸೆ ನೀಡಿ ಸೌದಿ ಅರೇಬಿಯಾಗೆ ಕಳುಹಿಸಿ ಅಲ್ಲಿಗೆ ತೆರಳಿದ ಬಳಿಕ ವೇಶ್ಯಾವಾಟಿಕೆ ಜಾಲಕ್ಕೆ ಮಾರಾಟ ಮಾಡಲು ಯೋಜನೆ ರೂಪಿಸಿದ್ದರು.ಬಳಿಕ ತಂದೆಯ ಸಹಾಯದೊಂದಿಗೆ ನಾನು ಆತನಿಂದ ತಪ್ಪಿಸಿಕೊಂಡು ಬಂದಿದ್ದೆ. ಇದಾದ ಬಳಿಕ ವಿಚ್ಛೇದನ ನೀಡುವಂತೆ ಕೇರಳ ಹೈಕೋರ್ಟ್ ನಲ್ಲಿ ಮನವಿ ಮಾಡಿಕೊಂಡಿದ್ದೇನೆಂದು ಕೇರಳ ಮೂಲದ ಮಹಿಳೆ ಹೇಳಿದ್ದಾರೆ.

ಪ್ರಕರಣ ಬೆಳಕಿಗೆ ಬರುತ್ತಿದಂತೆಯೇ ಕೇಂದ್ರ ಸರ್ಕಾರ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಿದೆ. ಪ್ರಕರಣ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಎನ್‍ಐಎ ಅಧಿಕಾರಿಗಳು, ಮುಹಮ್ಮದ್ ರಿಯಾಸ್ ರಶೀದ್ ಮಹಿಳೆ ಮೇಲೆ ದೌರ್ಜನ್ಯವೆಸಗಿದ್ದು, ಆಕೆಯ ಮೇಲೆ ಅತ್ಯಾಚಾರ ಮಾಡಿದ್ದಾರೆ. ಅಲ್ಲದೆ, ಆಕೆಯ ಆಕ್ಷೇಪಾರ್ಹ ಫೋಟೋಗಳು ಹಾಗೂ ವಿಡಿಯೋಗಳನ್ನು ಇಟ್ಟುಕೊಂಡು ಜಾಕೀರ್ ನಾಯ್ಕ್ ಅವರ ಶಿಷ್ಯೆಯಾಗಿ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಅಲ್ಲದೆ, ಆಕೆಯನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಲು ಹಿಂಸೆ ನೀಡಿದ್ದಾನೆ. ನಕಲಿ ದಾಖಲೆಗಳ ಮೂಲಕ ಆಕೆಯನ್ನು ವಿವಾಹಾದ ಬಳಿಕ ಐಸಿಸ್'ಗೆ ಸೇರ್ಪಡೆಗೊಳಿಸಲು ಯತ್ನ ನಡೆಸಿದ್ದಾನೆಂದು ಹೇಳಿದ್ದಾರೆ.



ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ