‘ಅವರಿಗೂ-ನಮಗೂ ಎಣ್ಣೆ ಸೀಗೆಕಾಯಿ ಇದ್ಹಂಗೆ’

R.ashok answer to ramalinga reddy allegation

31-01-2018

ಬೆಂಗಳೂರು: ಬೀದರ್ನಲ್ಲಿ ನಡೆದ ಯುವತಿ  ಮೇಲೆ ಅತ್ಯಾಚಾರ ಮತ್ತು ಹತ್ಯೆ ಪ್ರಕರಣ ‌ಭಯಭೀತಿಗೊಳಿಸಿದೆ. ಇದು ಗೂಂಡಾ ಸರ್ಕಾರ ಎಂದು, ಮಾಜಿ ಉಪ ಮುಖ್ಯಮಂತ್ರಿ ಹಾಗು ಬಿಜೆಪಿ ಮುಖಂಡ ಆರ್.ಅಶೋಕ್ ರಾಜ್ಯ ಸರ್ಕಾರದ ವಿರುದ್ಧ ಕೆಂಡಾಮಂಡಲರಾಗಿದ್ದಾರೆ.

ನಗರದ ಜಗನ್ನಾಥಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೀದರ್ನಲ್ಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ, ಅಲ್ಲಿನ‌ ಜಿಲ್ಲಾ ಮಂತ್ರಿ, ಉಸ್ತುವಾರಿಗಳು ತಪ್ಪಿತಸ್ಥರನ್ನು ಹಿಡಿಯದೇ, ಉಳಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಕುರಿತಂತೆ ಯುವತಿಗೆ ನ್ಯಾಯ ಸಿಗೋವರೆಗೂ ಬಿಜೆಪಿಯ ಹೋರಾಟ ಮುಂದುವರಿಯುತ್ತೆ ಎಂದು ಹೇಳಿದ್ದಾರೆ.

ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಅವರ ಹಾದಿಯನ್ನೇ ಗೃಹಸಚಿವ ರಾಮಲಿಂಗಾರೆಡ್ಡಿ ತುಳಿಯುತ್ತಿದ್ದಾರೆ. ಎಲ್ಲಿಯ ಓವೈಸಿ ಎಲ್ಲಿಯ ಬಿಜೆಪಿ, ನಮಗೂ ಅವರಿಗೂ ಎಣ್ಣೆ ಸೀಗೆಕಾಯಿ ಇದ್ಹಂಗೆ. ಜನರ ಹಾದಿ ತಪ್ಪಿಸಲು ಓವೈಸಿ-ಬಿಜೆಪಿಗೆ ಸಂಬಂಧ ಕಲ್ಪಿಸಲಾಗುತ್ತಿದೆ. ದಾಖಲೆ ಇದ್ದರೆ ಸರ್ಕಾರ, ಗೃಹಸಚಿವರು ಪ್ರದರ್ಶಿಸಲಿ ಎಂದು ಸವಾಲು ಹಾಕಿದ್ದಾರೆ. ಕಾಂಗ್ರೆಸ್ ಎಲ್ಲಾ ರಾಜ್ಯಗಳಲ್ಲೂ ಧೂಳಿಪಟ ಆಗಿದೆ, ಈಗ ಉಳಿದಿರೋದು ಕರ್ನಾಟಕ ಮಾತ್ರ, ಆದ್ದರಿಂದ ಭಯದಿಂದ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದರು.

ಇನ್ನು ಮುಸ್ಲೀಮರ ಮೇಲಿನ ಕೇಸ್ ತೆಗೆದಿದ್ದು, ಈ ಸರ್ಕಾರ ಯಾರ ಪರ ಇದೆ ಅಂತ ಜನತೆಗೆ ಗೊತ್ತಾಗಿದೆ. ನಮ್ಮ ಸರ್ಕಾರ ಇದ್ದಾಗ ಈ ಸಂಘಟನೆ ವಿರುದ್ಧ ಹೋರಾಟ ‌‌ಮಾಡಿದ್ದೆವು ಎಂದರು. ಅಲ್ಲದೇ ಗೃಹಸಚಿವರ ನೆರಳಲ್ಲೇ ಓವೈಸಿ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ್ದು, ನಾವು ಯಾವುದೇ ಹೊಂದಾಣಿಕೆ ಮಾಡಿಕೊಂಡಿಲ್ಲ ಎಂದು ಹೇಳಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ