ಮುಂದುವರೆದ ಸರಗಳ್ಳರ ಹಾವಳಿ

31-01-2018
ಬೆಂಗಳೂರು: ಬೆಂಗಳೂರಿನಲ್ಲಿ ಸರಗಳ್ಳರ ಹಾವಳಿ ಮುಂದುವರೆದಿದೆ. ನಿನ್ನೆ ವೃದ್ಧೆಯೊಬ್ಬರನ್ನು ರಸ್ತೆಯಲ್ಲಿ ಅಡಗಟ್ಟಿದ ದುಷ್ಕರ್ಮಿಗಳು, ಚಿನ್ನದ ಸರ ಕದ್ದೊಯ್ದ ಘಟನೆ ಬಗಲಗುಂಟೆಯಲ್ಲಿ ನಡೆದಿದೆ. ಬಗಲಗುಂಟೆಯ ನಿವಾಸಿಯಾದ ಚಿಕ್ಕಹೋನ್ನಮ್ಮ ಎಂಬುವವರಿಗೆ ಸೇರಿದ 50ಗ್ರಾಂ ಚಿನ್ನದ ಸರವನ್ನು ಖದೀಮರು ಎಗರಿಸಿದ್ದಾರೆ. ಚಿಕ್ಕಹೋನ್ನಮ್ಮ ತಮ್ಮ ಮೊಮ್ಮಗಳನ್ನ ಸಂಗೀತ ಶಾಲೆಗೆ ಬಿಟ್ಟು ಮನೆಗೆ ಹಿಂತಿರುಗುತ್ತಿದ್ದ ವೇಳೆ ಪಲ್ಸರ್ ಬೈಕ್ ನಲ್ಲಿ ಬಂದ ಖದೀಮರು, ಕತ್ತಿಗೆ ಕೈಹಾಕಿ ಚಿನ್ನದ ಸರ ಕಿತ್ತೊಯ್ದಿದ್ದಾರೆ. ಇನ್ನು ಕಳ್ಳರ ಈ ಕೃತ್ಯ ಸಿಸಿಕ್ಯಾಮೆರಾದಲ್ಲಿ ಸೆರೆಯಾಗಿದೆ. ಪ್ರಕರಣ ದಾಖಲಿಸಿಕೊಂಡ ಬಗಲಗುಂಟೆ ಪೊಲೀಸರು ಕಳ್ಳರಿಗಾಗಿ ಶೋಧ ನಡೆಸಿದ್ದಾರೆ.
ಒಂದು ಕಮೆಂಟನ್ನು ಹಾಕಿ