ಬಾಲಕನ ಮೇಲೆ ಕ್ರಿಕೆಟ್ ಕೋಚ್ ನ ಕ್ರೌರ್ಯ

The cruelty of the cricket coach on the boy

31-01-2018

ಬೆಂಗಳೂರು: ಕ್ರಿಕೆಟ್ ಕೋಚ್ ನಿರೀಕ್ಷೆಯಂತೆ ರನ್ ಗಳಿಸದಿದ್ದಕ್ಕೆ, ಕೋಚ್ ನಿಂದ ಬಾಲಕನೊಬ್ಬನ ಮೇಲೆ ಮಾರಣಂತಿಕ ಹಲ್ಲೆ ಮಾಡಿರುವ ಘಟನೆಯು ತಡವಾಗಿ ಬೆಳಕಿಗೆ ಬಂದಿದೆ. ಘಟನೆಯು ಬೆಂಗಳೂರಿನಲ್ಲಿ ನಡೆದಿದ್ದು, ನಗರದ ಬಸವನಗುಡಿ ಕ್ರಿಕೆಟ್ ಆಕಾಡೆಮಿ ಕೋಚ್ ರಮಣ ಎಂಬುವರು 13 ವರ್ಷದ ಆಟಗಾರನ ಮೇಲೆ ಹಲ್ಲೆ ಮಾಡಿದ್ದಾರೆ. ಇದರಿಂದ ಬಾಲಕನ ಎದೆ ಹಾಗೂ ಹೊಟ್ಟೆ ಭಾಗಕ್ಕೆ ತೀವ್ರ ಗಾಯಗಳಾಗಿವೆ. ಹಲ್ಲೆಯಿಂದ ಎರಡು ವಾರಗಳಿಂದ ಶಾಲೆಗೆ ತೆರಳದ ಬಾಲಕ ನೋವಿನಿಂದ ನರಳುತ್ತಿದ್ದಾನೆ.

ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್(ಕೆಎಸ್ಸಿಎ)ನ ಮ್ಯಾನೆಜಿಂಗ್ ಕಮಿಟಿ ಸದಸ್ಯ ಹಾಗೂ ಪ್ರಥಮದರ್ಜೆ ಕ್ರಿಕೆಟ್ ನ ಅಂಪೈರ್ ಆಗಿರುವಂತಹ ಬಿ.ಕೆ.ರವಿ ಅವರು ನಡೆಸುತ್ತಿರುವಂತಹ ಬಸವನಗುಡಿ ಕ್ರಿಕೇಟ್ ಆಕಾಡೆಮಿಯ ಕೋಚ್ ರಮಣ ಈ ಕೃತ್ಯ ಎಸಗಿದ್ದಾನೆ. ಖಾಸಗಿ ಟಿ-2೦ ಪಂದ್ಯಾವಳಿಯಲ್ಲಿ ಬಾಲಕ ರನ್ ಗಳಿಸದ್ದಕ್ಕೆ ಹಲ್ಲೆ ಮಾಡಿದ್ದು, ಕೋಚ್ ರಮಣ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಾಲಕನ ಪೋಷಕರು ಪೊಲೀಸರಿಗೆ ದೂರು ನೀಡಿ ಒತ್ತಾಯಿಸಿದ್ದಾರೆ. ಆದರೆ ಆಕಾಡೆಮಿಯಿಂದ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಸಲಾಗುತ್ತಿದೆ ಎಂದು ಬಾಲಕನ ಪೋಷಕರು ಆರೋಪಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

cricket Academy ಅಂಪೈರ್ ಪ್ರಥಮದರ್ಜೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ