ಮರಳು ದಂಧೆ: 60 ಮಂದಿ ಮೇಲೆ ಕೇಸ್

Illegal sand mafia: Police raids and file case against 60

31-01-2018

ಬೆಂಗಳೂರು: ಅಕ್ರಮ ಫಿಲ್ಟರ್ ಮರಳು ದಂಧೆಗಳ ಮೇಲೆ ಪೊಲೀಸರು ದಾಳಿ ಮಾಡಿ 60ಕ್ಕೂ ಹೆಚ್ಚು ಮಂದಿ ಮೇಲೆ ದೂರು ದಾಖಲಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲ್ಲೂಕಿನ ನಂದಗುಡಿ ಸುತ್ತಮುತ್ತ ಕಳೆದ ಹಲವು ದಿನಗಳಿಂದ ಅಕ್ರಮ ಫಿಲ್ಟರ್ ಮರಳು ದಂಧೆ ನಡೆಯುತ್ತಿದ್ದು, ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆ, ನಂದಗುಡಿ ಪಿಎಸ್ಐ ಅಶೋಕ್ ನೇತೃತ್ವದಲ್ಲಿ, ಕಳೆದ ಒಂದು ವಾರದಿಂದ ನಿರಂತರವಾಗಿ ದಾಳಿ ನಡೆಸುವ ಮುಖಾಂತರ ಅಕ್ರಮಗಳಿಗೆ ಮರಳು ದಂಧೆಗೆ ಬ್ರೇಕ್ ಹಾಕಿದ್ದಾರೆ.

ಕೆರೆ, ಕುಂಟೆ, ಸರ್ಕಾರಿ ಜಾಗ ಸೇರಿದಂತೆ ಖಾಸಗಿ ಜಮೀನುಗಳಲ್ಲೂ ಫಿಲ್ಟರ್ ಮರಳು ದಂಧೆ ನಡೆಸುತ್ತಿದ್ದರು. ಇನ್ನು ಅಕ್ರಮ ಫಿಲ್ಟರ್ ಮರಳು ದಂಧೆಯಲ್ಲಿ ತೊಡಗಿದ್ದ 60ಕ್ಕೂ ಅಧಿಕ ಜನರ ಮೇಲೆ ಪ್ರಕರಣ ದಾಖಿಲಿಸಿ ಕ್ರಮ ಕೈಗೊಂಡಿದ್ದಾರೆ. ಅದಲ್ಲದೇ ಫಿಲ್ಟರ್ ಮರಳು ದಂಧೆ ಮಾಡದ ಹಾಗೆ ಮರಳು ಫಿಲ್ಟರ್ಗೆ ಬಳಸುತ್ತಿದ್ದ ಪೈಪ್ ಸೇರಿದಂತೆ ಹಲವು ವಸ್ತಗಳನ್ನು ಸ್ಥಳದಲ್ಲೆ ಸುಟ್ಟು ಹಾಕಿ, ಮರಳು ಅಡ್ಡಾಗಳನ್ನು ಜೆಸಿಬಿ ಮುಖಾಂತರ ನಾಶ ಪಡಿಸಿದ್ದಾರೆ. ಪೊಲೀಸರ ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 


ಸಂಬಂಧಿತ ಟ್ಯಾಗ್ಗಳು

filter sand PSI ದಂಧೆ ಸಾರ್ವಜನಿಕ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ